ಚೌಡ್ಲು ಅಂಗನವಾಡಿ ಕೇಂದ್ರದಲ್ಲಿ ಆಯುಷ್ ಸೇವಾ ಕಾರ್ಯಕ್ರಮ

February 10, 2021

ಸೋಮವಾರಪೇಟೆ ಫೆ. 10 : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗು ಆಯುಷ್ ಇಲಾಖೆಯ ವತಿಯಿಂದ ಚೌಡ್ಲು ಅಂಗನವಾಡಿ ಕೇಂದ್ರದಲ್ಲಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಆಯುಷ್ ವೈದ್ಯಪದ್ದತಿಯಿಂದ ಅಡ್ಡಪರಿಣಾಮವಿಲ್ಲದ ಚಿಕಿತ್ಸೆ ಪಡೆಯಬಹುದು. ಸೇವಾಗ್ರಾಮದ ಉದ್ದೇಶವಾದ ಆಯುಷ್ ಅರಿವು ಮನೆಮದ್ದು, ಪ್ರಾತ್ಯಾಕ್ಷಿಕೆ ಹಾಗೂ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಸದಸ್ಯರಾದ ಎಚ್.ಎನ್.ತಂಗಮ್ಮ ಮಾತನಾಡಿ, ಕರೋನಾ ಸೋಂಕು ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಆಯುಷ್ ಔಷಧಿಗಳನ್ನು ಬಳಸಿದ್ದ ಹಿನ್ನಲೆಯಲ್ಲಿ ಸಕರಾತ್ಮಕ ಪ್ರಯೋಜನವಾಗಿದೆ ಎಂದರು.
ವೇದಿಕೆಯಲ್ಲಿ ಚೌಡ್ಲು ಗ್ರಾಪಂ ಸದಸ್ಯ ಸುರೇಶ್‍ಶೆಟ್ಟಿ, ತಾಲೂಕು ಆಯುಷ್ ವೈದ್ಯಾಧಿಕಾರಿ ಡಾ.ಎಸ್.ಸಿ.ಸ್ಮಿತಾ, ಡಾ.ಸೌಪರ್ಣಿಕ ಅವರುಗಳು 90 ಮಂದಿಯ ಆರೋಗ್ಯ ತಪಾಸಣೆ ಮಾಡಿದರು.

error: Content is protected !!