ಕುಂದಚೇರಿ ಗ್ರಾ.ಪಂ ಅಧ್ಯಕ್ಷರಾಗಿ ಸವಿತಾ ಉದಯಕುಮಾರ್, ಉಪಾಧ್ಯಕ್ಷರಾಗಿ ಕೆದಂಬಾಡಿ ವಿಶು ಆಯ್ಕೆ

February 10, 2021

ಮಡಿಕೇರಿ ಫೆ.10 : ಕುಂದಚೇರಿ ಗ್ರಾ.ಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸವಿತಾ ಉದಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೆದಂಬಾಡಿ ವಿಶು ಪ್ರವೀಣ್ ಕುಮಾರ್ ಆಯ್ಕೆಯಾಗಿದ್ದಾರೆ.
ಗ್ರಾಮಗಳ ಅಭಿವೃದ್ಧಿಯ ಕುರಿತು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಭರವಸೆಯ ಮಾತುಗಳನ್ನಾಡಿದರು.
ಕಾಂಗ್ರೆಸ್ ವಲಯಾಧ್ಯಕ್ಷ ಕೆ.ಎಂ.ಹರೀಶ್, ಸತತ 4ನೇ ಬಾರಿ ಸದಸ್ಯರಾಗಿ ಆಯ್ಕೆಯಾದ ಕೆ.ಯು.ಹಾರಿಸ್ ಕೋಪಟ್ಟಿ, ಪಿ.ಬಿ.ದಿನೇಶ್, ಬೊಮ್ಯನ ಬಸಪ್ಪ, ಬೇಬಿ ಪೊನ್ನಪ್ಪ, ನಮಿತಾ ಲೋಕೇಶ್, ಚಂದ್ರಕಲಾ, ಪ್ರಮುಖರಾದ ಕೆ.ಬಿ.ಸುರೇಂದ್ರ, ಕೆ.ಟಿ.ರಮೇಶ್, ಕೊಟ್ಟುಕತ್ತಿರ ಪೆಮ್ಮಯ್ಯ, ಕಾಡಂಡ ಭೀಮಯ್ಯ, ಕೋಪಟ್ಟಿ ದಿನೇಶ್, ಪೊನ್ನೇಟ್ಟಿ ವಾಸು, ಕೀಜನ ಡಲ್ಲೇಶ್ ಕುಮಾರ್, ಮಂದೋಡಿ ಶಿವಕುಮಾರ್, ಹಿರಿಯರಾದ ಇಸ್ಮಾಯಿಲ್ ಹಾಜಿ, ಮತ್ತಿತರ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳನ್ನು ಅಭಿನಂದಿಸಿದರು.
ಚುನಾವಣಾಧಿಕಾರಿಗಳಾಗಿ ಅಕ್ಷರ ದಾಸೋಹದ ಅಧಿಕಾರಿ ಮೋಹನ್ ಹಾಗೂ ಪಿಡಿಒ ಬಿ.ಪಿ.ಗೀತಾಂಜಲಿ ಕಾರ್ಯನಿರ್ವಹಿಸಿದರು.

error: Content is protected !!