ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆಗೆ ಚಾಲನೆ

February 10, 2021

ಮಡಿಕೇರಿ ಫೆ.10 : ಸಹಕಾರ ಸಂಘಗಳ ಗ್ರಾಹಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 21 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮೈಕ್ರೋ ಎಟಿಎಂ ಅಳವಡಿಸಲಾಗುತ್ತಿದ್ದು, ಇಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ನೂತನ ಯೋಜನೆಗೆ ಚಾಲನೆ ನೀಡಲಾಯಿತು.
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಾಂಡ್ ಗಣಪತಿ ಅವರು ಮಡಿಕೇರಿಯ ಕೇಂದ್ರ ಕಚೇರಿಯಿಂದಲೇ ಮೈಕ್ರೋ ಎಟಿಎಂ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು ನೂತನ ವ್ಯವಸ್ಥೆಯನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್‍ಗೆ ಕೃಷಿಕರು ಹೋಗಿ, ಬರುವುದು ಕಷ್ಟಸಾಧ್ಯವಾಗುವುದರಿಂದ ಸಂಘದಲ್ಲಿಯೇ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಮೈಕ್ರೋ ಎಟಿಎಂ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ರೈತರು ಆರ್ಥಿಕ ವ್ಯವಹಾರವನ್ನು ಸುಲಭವಾಗಿ ಮಾಡಬಹುದಾಗಿದೆ. ಸಾಲ ಪಡೆಯುವುದು, ಉಳಿತಾಯ ಖಾತೆ, ಸಾಲ ಬಿಡುಗಡೆ ಹೀಗೆ ಹಲವು ರೀತಿಯ ಆರ್ಥಿಕ ವ್ಯವಹಾರ ನಡೆಸಲು ಮೈಕ್ರೋ ಎಟಿಎಂ ಅನುಕೂಲವಾಗಲಿದೆ ಎಂದರು.
ಸಂಘದ ಉಪಾಧ್ಯಕ್ಷ ಮರದಾಳು ಉಲ್ಲಾಸ್, ನಿರ್ದೇಶಕರುಗಳಾದ ಪೇರಿಯನ ಪೂಣಚ್ಚ, ಧನಂಜಯ, ಪುತ್ತರೀರ ಸೀತಮ್ಮ, ಕೆ.ವಾಣಿ ಕಾಳಪ್ಪ, ಕಾಶಿ, ವ್ಯವಸ್ಥಾಪಕರಾದ ಉಳುವಾರನ ನಂದಿನಿ, ಲೆಕ್ಕ ಪರಿಶೋಧಕರಾದ ರಮೇಶ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

error: Content is protected !!