ನಂಜರಾಯಪಟ್ಟಣ ಗ್ರಾ. ಪಂ. ಅಧ್ಯಕ್ಷರಾಗಿ ಸಿ. ಎಲ್. ವಿಶ್ವ, ಉಪಾಧ್ಯಕ್ಷರಾಗಿ ಎಂ. ಎಸ್. ಸಮೀರಾ ಆಯ್ಕೆ

February 11, 2021

ಮಡಿಕೇರಿ ಡಿ. 11 : 8 ಸ್ಥಾನಗಳ ಪೈಕಿ 5 ಸ್ಥಾನದಲ್ಲಿ ಜೆಡಿಎಸ್ ಗಲುವಿನ ನಗೆ ಬೀರಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ ಎಲ್ ವಿಶ್ವ ಮತ್ತು ಉಪಾಧ್ಯಕ್ಷರಾಗಿ ಸಮೀರಾ ಎಂ ಎಸ್ ಅವರು ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಬಿಜೆಪಿ ಭದ್ರಕೋಟೆಯಾಗಿದ್ದ ನಂಜರಾಯಪಟ್ಟಣ ಈ ಬಾರಿ ಜೆಡಿಎಸ್ ಬೆಂಬಲಿತ ಸದಸ್ಯರಾದ ಕುಸುಮಾವತಿ,ಜಾಜಿ ತಮ್ಮಯ್ಯ,ಗಿರಿಜ,ಸಮೀರ ಎಂ ಎಸ್,ಸಿ ಎಲ್ ವಿಶ್ವ ಅವರ ಗೆಲುವಿನೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿಯಲು ಯೇಶಸ್ವಿಯಾಯಿತು.
ಪ್ರಚಂಡ ಬಹುಮತ ಪಡೆದ ಸಿ ಎಲ್ ವಿಶ್ವ ಮತ್ತು ತಂಡ ಚುನಾವಣೆಗೆ ಸಹಕರಿಸಿದ ಮುಖಂಡರಿಗೂ ಮತದಾರರಿಗೂ ಅಭಿನಂದನೆ ಸಲ್ಲಿಸಿದರು.

error: Content is protected !!