ಪೊಂಗುರಿ ತ್ರೈಮಾಸಿಕ ಸಂಚಿಕೆಗೆ ಸ್ವ-ರಚಿತ ಬರಹ ಆಹ್ವಾನ

February 11, 2021

ಮಡಿಕೇರಿ ಫೆ.11 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪೊಂಗುರಿ ತ್ರೈಮಾಸಿಕ ಸಂಚಿಕೆಗೆ ಸ್ವ-ರಚಿತ ಬರಹಗಳನ್ನು ಅಹ್ವಾನಿಸಲಾಗಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತ್ರೈಮಾಸಿಕ ಪೊಂಗುರಿ ಸಂಚಿಕೆಯನ್ನು ಸಾಹಿತಿ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಪ್ರಕಟಿಸಿದೆ. ಈ ಮೊದಲು ಎಲ್ಲಿಯೂ ಪ್ರಕಟವಾಗದ, ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕು, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ, ಸಂಶೋದನಾ ಲೇಖನಗಳನ್ನು ನುಡಿ ಫಾಂಟ್‍ನಲ್ಲಿ ಟೈಪ್ ಮಾಡಿ ಅಥವಾ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು ಫೆಬ್ರವರಿ 28 ರೊಳಗಾಗಿ ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಗೆ ತಲುಪಿಸಬೇಕು.
ಬರಹಗಾರರು ಬರೆದು ಕಳಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ನಮೂದಿಸಬೇಕು ಮತ್ತು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್‍ಬುಕ್‍ನ ಜೆರಾಕ್ಸ್ ಪ್ರತಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಕಚೇರಿ ದೂರವಾಣಿ 08272-229074ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

error: Content is protected !!