ಶಂಸುಲ್ ಉಲಮಾ ಎಜುಕೇಷನ್ ಟ್ರಸ್ಟ್ ನಿಂದ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ

February 11, 2021

ಮಡಿಕೇರಿ ಫೆ. 11 : ಶಂಸುಲ್ ಉಲಮಾ ಅನಾಥ ಮತ್ತು ಬಡ ಬಾಲಕಿಯರ ವಸತಿ ನಿಲಯದ 3 ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ವಿವಾಹ ಕಾರ್ಯ ವನ್ನು ಸಮಾಜ ಸೇವಕ, ಧಾರ್ಮಿಕ ಪಂಡಿತರ ಸಮ್ಮುಖದಲ್ಲಿ ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಸಭಾಂಗಣದಲ್ಲಿ ನಡೆಯಿತು.
ಧಾರ್ಮಿಕ ಪಂಡಿತ ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಂ ಮಾತನಾಡಿ, ಬಡ ಹಾಗೂ ನಿರ್ಗತಿಕ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಪೆರುಂಬಾಡಿಯ ಸಂಶುಲ್ ಉಲಮಾ ಎಜುಕೇಶನಲ್ ಟ್ರಸ್ಟ್ ಇದುವರೆಗೂ ಇಪ್ಪತ್ತು ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಿ, ದಾಂಪತ್ಯ ಜೀವನ ನಡೆಸಲು ಸಹಕಾರ ನೀಡಿದೆ. ಕಲಿಯುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಪ್ರತಿಭಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವ ಮೂಲಕ ಸಂಕಷ್ಟದ ಬದುಕಿನಲ್ಲಿ ಜೀವನ ನಡೆಸುವ ಬಡ ಕುಟುಂಬಗಳ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಆಶಾಕಿರಣವಾಗಿರುವ ಸಂಶುಲ್ ಉಲಮಾ ಟ್ರಸ್ಟ್ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಯಾರೂ ಇಲ್ಲದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ರೀತಿಯಲ್ಲಿ ಪ್ರತಿಯೊಬ್ಬ ದಾನಿಯು ಕೇಂದ್ರದಲ್ಲಿರುವ ಮಕ್ಕಳಿಗೆ ಎಲ್ಲಾ ರೀತಿಯ ಆರ್ಥಿಕ ಸಹಾಯ ನೀಡಿ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಮುಂದೆ ತರುವ ಪ್ರಯತ್ನ ರೂಪಿಸಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡಬೇಕೆಂದರು.

ಶಂಸುಲ್ ಉಲಮಾ ಟ್ರಸ್ಟ್ ನ ಅಧ್ಯಕ್ಷ ಸಿ. ಪಿ. ಎಂ. ಬಶೀರ್ ಹಾಜಿ ಮಾತನಾಡಿ, ಹದಿನೈದು ವರ್ಷಗಳ ಹಿಂದೆ
ಬಡ ನಿರ್ಗತಿಕ ಮಕ್ಕಳಿಗೆ ಬೌದ್ಧಿಕ ಹಾಗೂ ಧಾರ್ಮಿಕ ಉನ್ನತ ಶಿಕ್ಷಣ ನೀಡುವ ಮೂಲಕ ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಟ್ರಸ್ಟ್ ಮುಂದಾಗಿದೆ. ಇದರೊಂದಿಗೆ ದಾಂಪತ್ಯ ಜೀವನ ನಡೆಸಿ ಭವಿಷ್ಯ ರೂಪಿಸಿಕೊಳ್ಳಲು
ಈ ಹಿಂದೆ 20ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಲಾಗಿದೆ.
ಬಡ ಹಾಗೂ ನಿರ್ಗತಿಕ ಹೆಣ್ಣು ಮಕ್ಕಳ ಭವಿಷ್ಯ ಉನ್ನತೀಕರಣಕ್ಕೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವ ಮೂಲಕ ಹೊಲಿಗೆ ತರಬೇತಿ, ಕಂಪ್ಯೂಟರ್ ಸೇರಿದಂತೆ ಉನ್ನತ ವ್ಯಾಸಂಗಕ್ಕೂ ಹೆಚ್ಚಿನ ಸಹಕಾರ ನೀಡಲಾಗುತ್ತಿದೆ. 70ಕ್ಕೂ ಹೆಚ್ಚು ಮಕ್ಕಳು ಕೇಂದ್ರದಲ್ಲಿದ್ದು, ದಾನಿಗಳ ಸಹಕಾರವು ಅತ್ಯಗತ್ಯವಾಗಿದ್ದು ಟ್ರಸ್ಟ್ ನೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಉಪ ಖಾಝಿ ಎಂ. ಎಂ ಅಬ್ದುಲ್ಲಾ ಫೈಝಿ ನಿಖಾ ನೇತೃತ್ವ ವಹಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 3 ಜೋಡಿಗಳಿಗೆ ಶುಭ ಹಾರೈಸಿದರು.
ಮಾಜಿ ಶಾಸಕ ಕೆ. ಎಂ ಇಬ್ರಾಹಿಂ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ. ಎ ಯಾಕೂಬ್, ಹಿರಿಯ ರಾಜಕಾರಣಿ ಸೈಯದ್, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ ರಾಫಿ, ಕೆ. ಎಂ.ಎ ಅಧ್ಯಕ್ಷ ಸೂಫಿ ಹಾಜಿ, ಪ್ರಮುಖರಾದ ರಶೀದ್ ಹಾಜಿ , ಮೂಸಾ ಮೌಲವಿ, ಗಫಾರ್, ಆರಿಫ್ ಪೈಝಿ,ತಮ್ಲಿಕ್ ದಾರಿಮಿ, ಉಮ್ಮರ್ ಪೈಝಿ, ಉಸ್ಮಾನ್, ನೌಫಲ್ ಹುದವಿ, ಅಶ್ರಫ್, ಲತೀಫ್ ,ಎ. ಕೆ ಹಕೀಂ, ಮಣಿ ಮೊಹಮ್ಮದ್,ಕೆ. ಯು ಮಜೀದ್, ಸೇರಿದಂತೆ ಮತ್ತಿತರರು ಇದ್ದರು.

error: Content is protected !!