ಬ್ಯಾಡಗೊಟ್ಟ ಗ್ರಾ.ಪಂ ಅಧ್ಯಕ್ಷರಾಗಿ ವಿನೋದ ಆನಂದ್, ಉಪಾಧ್ಯಕ್ಷರಾಗಿ ಪಾವನ ಗಗನ್ ರೈ ಆಯ್ಕೆ
February 11, 2021

ಮಡಿಕೇರಿ ಫೆ. 11 : ಬ್ಯಾಡಗೊಟ್ಟ ಗ್ರಾ.ಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವಿನೋದ ಆನಂದ, ಉಪಾಧ್ಯಕ್ಷರಾಗಿ ಪಾವನಗಗನ್ ರೈ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತ್ ಕುಮಾರ್, ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಎಲ್.ಜನಾರ್ಧನ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಹೂವಯ್ಯ, ಕಾಂಗ್ರೆಸ್ ಮುಖಂಡರಾದ ಜೆ. ಕೆ.ತೇಜಕುಮಾರ್, ಡಿ.ಆರ್. ವೇದಕುಮಾರ್, ನಾಸಿರ್, ಎಸ್. ಎಲ್.ಮೇದಪ್ಪ, ಇಸಾಕ್, ಬೆಂಬಳೂರು ಬೂತ್ ಅಧ್ಯಕ್ಷ ಬಿ.ಪಿ.ಅಶೋಕ್, ಗಗನ್ ರೈ, ಕೆ.ಹೆಚ್.ರೆಹಮಾನ್ ಮತ್ತು ನೂತನ ಗ್ರಾ.ಪಂ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದು, ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.


