ಸಿದ್ದಾಪುರ ಗ್ರಾ.ಪಂ ಅಧ್ಯಕ್ಷರಾಗಿ ತುಳಸಿ ಗಣಪತಿ, ಉಪಾಧ್ಯಕ್ಷರಾಗಿ ಮಹೇಶ್‍ಕುಮಾರ್ ಆಯ್ಕೆ

February 11, 2021

ಮಡಿಕೇರಿ ಫೆ. 11 : ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೀತಮಾಡ ತುಳಸಿ ಗಣಪತಿ ಹಾಗೂ ಉಪಾಧ್ಯಕ್ಷರಾಗಿ ಮಹೇಶ್‍ಕುಮಾರ್ ಟಿ.ಬಿ ಆಯ್ಕೆಯಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಭದ್ರಕೋಟೆಗೆ ಈ ಬಾರಿ ಬಿಜೆಪಿ ಲಗ್ಗೆಯಿಟ್ಟಿದ್ದು, ಒಟ್ಟು 25 ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಕಳೆದ ಬಾರಿ ಒಂದು ಸ್ಥಾನವು ಕೂಡ ಲಭಿಸದ ಬಿಜೆಪಿ ಈ ಬಾರಿ ನಿರೀಕ್ಷೆಗೆ ಮೀರಿ ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಬಿಜೆಪಿ ಪಕ್ಷದ ಪ್ರಮುಖರಾದ ರಾಬಿನ್ ದೇವಯ್ಯ, ಚಲನ್ ಕುಮಾರ್, ಬೋಪಣ್ಣ ,ಪ್ರವೀಣ್, ರಾಜೇಶ್, ವಿ.ಕೆ ಲೋಕೇಶ್, ಮನೋಹರ, ಅನಿಲ್ ಶೆಟ್ಟಿ, ಮಧು, ಗಿರೀಶ್, ಚುಮ್ಮಿ ಪೂವಯ್ಯ, ನಾಣಯ್ಯ, ರಂಜನ್, ರಾಜೀವ ಸೇರಿದಂತೆ ಮತ್ತಿತರರು ಇದ್ದರು.

error: Content is protected !!