ಹಟ್ಟಿಹೊಳೆ ತಿರುವಿನಲ್ಲಿ ಬಸ್, ಕಾರು ಡಿಕ್ಕಿ : ನಾಲ್ವರಿಗೆ ಗಾಯ

February 11, 2021

ಮಡಿಕೇರಿ ಫೆ.11 : ಕೆಎಸ್‍ಆರ್‍ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರಪೇಟೆ ರಸ್ತೆಯ ಹಟ್ಟಿಹೊಳೆ ತಿರುವಿನಲ್ಲಿ ನಡೆದಿದೆ.
ಮಡಿಕೇರಿಯಿಂದ ಸೂರ್ಲಬಿಗೆ ತೆರಳುತ್ತಿದ್ದ ಬಸ್ ಮತ್ತು ಕೊಡ್ಲಿಪೇಟೆಯಿಂದ ಭಾಗಮಂಡಲದ ಕಡೆಗೆ ಹೋಗುತ್ತಿದ್ದ ‘ಕೂಡ್ಲೂರು’ ನಿವಾಸಿ ಸುರೇಶ್ ಅವರ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಸುರೇಶ್ ಹಾಗೂ ಅವರ ಮೂವರು ಮಕ್ಕಳು ಘಟನೆಯಿಂದ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಭಾರೀ ಅಪಾಯವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!