ಬಾಲ್ಯಾವಸ್ಥೆ ಮತ್ತು ಕಿಶೋರ ಕಾರ್ಮಿಕ ಕಾಯ್ದೆ : ಸೋಮವಾರಪೇಟೆಯಲ್ಲಿ ಅನಿರೀಕ್ಷಿತ ತಪಾಸಣೆ

ಮಡಿಕೇರಿ ಫೆ.11 : ಕೊಡಗು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ(ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ), ವಿಶೇಷ ಮಕ್ಕಳ ಪೆÇೀಲಿಸ್ ಘಟಕ, ಮಕ್ಕಳ ರಕ್ಷಣಾ ಘಟಕ ಇವರುಗಳ ಸಹಭಾಗಿತ್ವದಲ್ಲಿ ಫೆ.10 ರಂದು ಸೋಮವಾರಪೇಟೆ ತಾಲ್ಲೂಕಿನ ವಿವಿಧ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಬಾಲ್ಯಾವಸ್ಥೆಯ ಹಾಗೂ ಕಿಶೋರ ಕಾರ್ಮಿಕ ಕಾಯ್ದೆಯನ್ವಯ ಅನಿರೀಕ್ಷಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಚರಣೆ ವೇಳೆ ಕಂಡು ಬಂದ ಬಾಲ ಕಾರ್ಮಿಕನನ್ನು ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಪುನರ್ವಸತಿ ಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ವಿವಿಧ ಸಂಸ್ಧೆಗಳ ಮಾಲೀಕರುಗಳಿಗೆ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಧೆಯ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಬಗ್ಗೆ ಭಿತ್ತಿ ಪತ್ರಗಳನ್ನು ಹಾಗೂ ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಿ ಎಚ್ಚರಿಸಲಾಯಿತು. ಹಾಗೂ ತಪ್ಪಿತಸ್ಥ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಸೂಕ್ತ ಮಾರ್ಗಸೂಚಿಯೊಂದಿಗೆ ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಈಗಾಗಲೇ ಶಾಲೆಗಳನ್ನು ಪುನರ್ ಆರಂಭಿಸಲಾಗಿದೆ. ಆದರು ಪೆÇೀಷಕರ ನಿರ್ಲಕ್ಷ್ಯ ಹಾಗೂ ಕೋವಿಡ್ ಭೀತಿಯಿಂದಾಗಿ ಕೆಲವು ಮಕ್ಕಳು ಶಾಲಾ ಶಿಕ್ಷಣದ ಬಗ್ಗೆ ಕಡೆಗಣನೆ ಮಾಡುತಿದ್ದಾರೆ. ಇದರಿಂದಾಗಿ ಮಕ್ಕಳು ಬಾಲ ಕಾರ್ಮಿಕರಾಗಿ ಕೃಷಿ ಕ್ಷೇತ್ರಗಳಲ್ಲಿ, ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ದುಡಿಮೆಯಲ್ಲಿ ತೊಡಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಧೆಯ ಮಕ್ಕಳನ್ನು ವಿವಿಧ ಸಂಸ್ಥೆಗಳ ಮಾಲೀಕರುಗಳು ಕೆಲಸಕ್ಕೆ ನಿಯೋಜಿಸಿ ಕೊಳ್ಳದಂತೆ ಕ್ರಮವಹಿಸಲು ಸೂಚಿಸಲಾಗಿದೆ.
ಈ ಸಂದರ್ಭ ಹಿರಿಯ ಕಾರ್ಮಿಕ ನಿರೀಕ್ಷಕರಾದ ಲೀನಾ, ವಿಶೇಷ ಮಕ್ಕಳ ಪೆÇಲೀಸ್ ಘಟಕದ ಮಹೇಶ್, ಸುಮತಿ, ಯೋಜನಾ ನಿರ್ದೇಶಕರಾದ ಆರ್ ಸಿರಾಜ್ ಅಹ್ಮದ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಿರಣ್, ಕು.ಅನುಷಾ ಅವರುಗಳು ಉಪಸ್ಥಿತರಿದ್ದರು.