ಹಾನಗಲ್ಲು ಗ್ರಾ.ಪಂ ಅಧ್ಯಕ್ಷೆಯಾಗಿ ಲಕ್ಷ್ಮೀಪಾಂಡ್ಯ, ಉಪಾಧ್ಯಕ್ಷರಾಗಿ ಮಿಥುನ್ ಆಯ್ಕೆ

February 11, 2021

ಸೋಮವಾರಪೇಟೆ ಫೆ.11 : ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಲಕ್ಷ್ಮೀಪಾಂಡ್ಯ ಹಾಗು ಉಪಾಧ್ಯಕ್ಷರಾಗಿ ಎಚ್.ವಿ. ಮಿಥುನ್ ಆಯ್ಕೆಯಾಗಿದ್ದಾರೆ.
ಪಂಚಾಯಿತಿಯ ಅಧ್ಯಕ್ಷ ಸ್ಥಾನ ಬಿಸಿಎಂಬಿ ಮಹಿಳೆಗೆ ಹಾಗು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬುಧವಾರ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಮಿಥುನ್ ಹಾಗು ಡಿ.ಎಸ್.ಸುರೇಶ್ ನಾಮಪತ್ರ ಸಲ್ಲಿಸಿದರು. ನಂತರ ಚುನಾವಣೆ ನಡೆದು ಮಿಥುನ್ 8 ಮತಗಳನ್ನು ಪಡೆದು ಆಯ್ಕೆಯಾದರು. ಸುರೇಶ್ 4 ಮತಗಳನ್ನು ಪಡೆದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಅವರು ಚುನಾವಣಾಧಿಕಾರಿಯಾಗಿ, ಪಿಡಿಓ ಅಸ್ಮಾ ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭ ಗ್ರಾ.ಪಂ. ಚುನಾಯಿತ ಜನಪ್ರತಿನಿದಿಗಳಾದ ಬಿ.ಈ.ರೇಣುಕಾ, ಬಿ.ಕೆ.ಸುದೀಪ್, ಸುಶೀಲಾ, ಬಿ.ಎಂ.ಉಷಾ, ಲಕ್ಷ್ಮಿ, ಯಶಾಂತ್ ಕುಮಾರ್, ಕೆ.ಎಂ.ಲಲಿತ, ಅನ್ನಪೂರ್ಣ, ವಿಜಯ್ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಇತರರು ಅಧ್ಯಕ್ಷೆ ಹಾಗು ಉಪಾಧ್ಯಕ್ಷರನ್ನು ಅಭಿನಂಧಿಸಿದರು.

error: Content is protected !!