ತೋಟಗಳಲ್ಲಿ ಆಲ್ಯೂಮಿನಿಯಂ ಏಣಿಗಳನ್ನು ಬಳಸದಂತೆ ಸೆಸ್ಕ್ ಮನವಿ

11/02/2021

ಸೋಮವಾರಪೇಟೆ ಫೆ.11 : ಕಾಫಿ ಮೆಣಸು ತೋಟಗಳಲ್ಲಿ ಕೊಯ್ಲು ಮತ್ತಿತರ ಕೆಲಸಗಳ ಸಂದರ್ಭ ಆಲ್ಯೂಮಿನಿಯಂ/ವಾಹಕಗಳ ಏಣಿಗಳನ್ನು ಬಳಸದಂತೆ ಸೆಸ್ಕ್ ಕಾರ್ಯ ನಿರ್ವಾಹಕ ಇಂಜಿನಿಯರ್ ಧನುಂಜಯ್ ಮನವಿ ಮಾಡಿದ್ದಾರೆ.
ವಿದ್ಯುತ್ ವಿತರಣಾ ಜಾಲವಿರುವ ಕಡೆಗಳಲ್ಲಿ ಆಲ್ಯೂಮಿನಿಯಂ/ವಾಹಕಗಳ ಏಣಿಗಳನ್ನು ಬಳಸುತ್ತಿರುವ ಸಂದರ್ಭ ವಿದ್ಯುತ್ ಅಪಘಾತವಾಗುವ ಸಂದರ್ಭವಿರುವುದರಿಂದ ಬಿದಿರು, ಮರ, ರಬ್ಬರ್, ಏಣಿಗಳನ್ನು ಬಳಸುವಂತೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ. ಎಲ್.ಟಿ-4(ಸಿ) ಜಕಾತಿಯಲ್ಲಿರುವ ಐ.ಪಿ.ಸೆಟ್‍ನ ಬಾಕಿ ಬಿಲ್ ಪಾವತಿಸಿ ನಿಗಮದ ಆರ್ಥಿಕತೆಯನ್ನು ಬಲಪಡಿಸಿ, ಬಡ್ಡಿಯನ್ನು ತಪ್ಪಿಸಿಕೊಳ್ಳಲು ನಿಗಮದೊಂದಿಗೆ ಸಹಕರಿಸಲು ಮನವಿ ಮಾಡಿದ್ದಾರೆ.