ತೋಳೂರುಶೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ರುದ್ರಪ್ಪ, ಉಪಾಧ್ಯಕ್ಷರಾಗಿ ಭವಾನಿ ಆಯ್ಕೆ

February 11, 2021

ಸೋಮವಾರಪೇಟೆ ಫೆ.11 : ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರುದ್ರಪ್ಪ ಹಾಗು ಉಪಾಧ್ಯಕ್ಷರಾಗಿ ಭವಾನಿ ಅವಿರೋಧ ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶೋಭ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸದಸ್ಯರಾದ ಆರತಿ, ಉಷಾ, ಡಿ.ಎ.ನವೀನ್, ಸಿ.ಟಿ.ಮೋಹಿತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಭಾಗವಹಿಸಿದ್ದರು. ಬಿಜೆಪಿ ಪ್ರಮುಖರಾದ ಬಿ.ಜೆ.ದೀಪಕ್, ಬಿ.ಎ.ಧರ್ಮಪ್ಪ, ಕೆ.ಕೆ.ಸುಧಾಕರ್, ವಿ.ಎನ್.ಜಗದೀಶ್ ಹಾಜರಿದ್ದರು.

error: Content is protected !!