ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಕೇರಳ ಮುಸ್ಲಿಂ ಲೀಗ್ ಉಸ್ತುವಾರಿ ಸಯ್ಯದ್ ಪಾಣಕ್ಕಾಡ್ ತಂಙಳ್ ಭೇಟಿ

February 12, 2021

ಮಡಿಕೇರಿ ಫೆ. 11 : ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ನಿವಾಸಕ್ಕೆ ಕೇರಳ ರಾಜ್ಯ ಮುಸ್ಲಿಂ ಲೀಗ್ ಉಸ್ತುವಾರಿ, ಸಮಿತಿ ಸದಸ್ಯ ಪಾಣಕ್ಕಾಡ್ ಸಯ್ಯದ್ ಸಾದಿಕಾಲಿ ಶಿಹಾಬ್ ತಂಙಳ್ ಭೇಟಿ ನೀಡಿದರು.
ಈ ಸಂದರ್ಭ ತೆಕ್ಕಿಲ್ ಪ್ರತಿಷ್ಠಾನದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರತಿಷ್ಠಾನದಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿರಲಿ ಎಂದರು.
ಇದೇ ಸಂದರ್ಭ ಸಯ್ಯದ್ ಪಾಣಕ್ಕಾಡ್ ತಂಙಳ್ ಅವರನ್ನು ಪ್ರತಿಷ್ಠಾನ ವತಿಯಿಂದ ಸನ್ಮಾನಿಸಿ, ಗೌರವಿಸಿದರು.
ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಖತೀಬ ಅಲ್ಹಾಜ್ ಇಸ್ಹಾಖ್ ಬಾಖವಿ, ಟಿ.ಎಮ್ ಬಾಬಾ ಹಾಜಿ ತೆಕ್ಕಿಲ್, ಟಿ.ಎಮ್.ಶಾಝ್ ತೆಕ್ಕಿಲ್, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಟಿ.ಎಮ್.ಜಾವೇದ್, ತೆಕ್ಕಿಲ್, ಕೆ.ಎಮ್ ಸಿಸಿ ನೌಶಾದ್, ಕಾಸರಗೋಡು ಜಿ.ಪಂ ಸದಸ್ಯ ಪಿ.ಬಿ.ಶಫೀಖ್, ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್‍ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಪೇರಡ್ಕ ಮಸೀದಿಯ ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಖ್ ತೆಕ್ಕಿಲ್ ಮೊಟ್ಟಂಗಾರ್, ಅಬೂಬಕ್ಕರ್ ಪಾರೆಕ್ಕಲ್, ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಕೆ.ಎಮ್.ಮುಸ್ತಫಾ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಸುದ್ದೀನ್, ರಿಯಾಜ್ ಕಟ್ಟೆಕಾರ್ಸ್, ಸಿದ್ದೀಖ್ ಕೊಕ್ಕೊ, ತಾಜುದ್ದೀನ್ ಟರ್ಲಿ, ಜುನೈದ್ ಗೂನಡ್ಕ ಮುಂತಾದವರು ಉಪಸ್ಥಿತರಿದ್ದರು.
ಸ್ಥಳಿಯ ಮಸೀದಿ ಖತೀಬ ಬಹು ಅಲ್ಹಾಜ್ ಇಸ್ಹಾಖ್ ಬಾಖವಿ ತಂಙಳ್ ಅವರ ಪರಿಚಯ ಮಾಡಿದರು.

error: Content is protected !!