ಐಗೂರು ಗ್ರಾ.ಪಂ ಅಧ್ಯಕ್ಷರಾಗಿ ಪಾರ್ವತಿ, ಉಪಾಧ್ಯಕ್ಷರಾಗಿ ಜಾನಕಿ ಮೇದಪ್ಪ ಆಯ್ಕೆ

February 12, 2021

ಸುಂಟಿಕೊಪ್ಪ,ಫೆ.12: ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪಾರ್ವತಿ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಾನಕಿ ಮೇದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
11 ಸದಸ್ಯ ಬಲವಿರುವ ಐಗೂರು ಗ್ರಾ.ಪಂ.ಗೆ ಬಿಜೆಪಿ 8,ಜೆಡಿಎಸ್ 1,ಕಾಂಗ್ರೆಸ್ 1,ಎಸ್‍ಡಿಪಿಐ ಯ1,ಸದಸ್ಯರುಗಳು ಚುನಾಯಿತರಾಗಿದ್ದರು.
ಅಧ್ಯಕ್ಷ ಸ್ಥಾನ ಪರಿಶೀಷ್ಟ ಮಹಿಳೆ ಉಪಾಧ್ಯಕ್ಷ ಸ್ಥಾನ ಬಿಸಿಎಂಬಿ ಮಹಿಳೆಗೆ ಮೀಸಲಿಡಲಾಗಿತ್ತು.
ಚುನಾವಣಾಧೀಕಾರಿಯಾಗಿ ಸೋಮವಾರಪೇಟೆ ತಾಲೂಕು ತಹಶೀಲ್ಧಾರರಾದ ಗೋವಿಂದರಾಜು ಕಾರ್ಯನಿರ್ವಹಿಸಿದ್ದರು.
ತಹಶೀಲ್ಧಾರ ಗೋವಿಂದರಾಜು ಹಾಗೂಸರ್ವ ಸದಸ್ಯರುಗಳು ಪಿಡಿಓ ಯಾದವ್ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

error: Content is protected !!