ಹರದೂರು ಗ್ರಾ.ಪಂ ಅಧ್ಯಕ್ಷರಾಗಿ ಬಿ.ಡಿ.ಪದ್ಮನಾಭ, ಉಪಾಧ್ಯಕ್ಷರಾಗಿ ಎ.ಎ.ಬೋಜಮ್ಮ

February 12, 2021

ಸುಂಟಿಕೊಪ್ಪ,ಫೆ.12: ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಬಿ.ಡಿ.ಪದ್ಮನಾಭ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ಎ.ಎ.ಬೋಜಮ್ಮ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ.ಪದ್ಮನಾಭ, ಕಾಂಗ್ರೆಸ್‍ನ ಅಬ್ಧುಲ್ ಸಲಾಂ, ಎಸ್‍ಡಿಪಿಐನ ಮುಸ್ತಾಫ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಆಭ್ಯರ್ಥಿ ಅಬ್ಧುಲ್ ಸಲಾಂ ನಾಮಪತ್ರ ಹಿಂಪಡೆದುಕೊಂಡರು. 11 ಮಂದಿ ಸದಸ್ಯರಿಗೆ ಗುಪ್ತ ಮತದಾನ ನಡೆದು ಮತ ಎಣಿಕೆ ನಡೆದಾಗ ಪದ್ಮನಾಭರಿಗೆ 7 ಮತ ಮುಸ್ತಾಫರಿಗೆ 4 ಮತ ಲಭಿಸಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಬೋಜಮ್ಮ ಕಾಂಗ್ರೆಸ್‍ನ ಉಷಾ ಸ್ಪರ್ಧಿಸಿದರು. ಮತ ಎಣಿಕೆಯಾದಾಗ ಬೋಜಮ್ಮ 7 ಉಷಾ 4 ಮತ ಪಡೆದುಕೊಂಡರು.

error: Content is protected !!