ಸುಂಟಿಕೊಪ್ಪದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಸಂಸ್ಮರಣೆ

February 12, 2021

ಸುಂಟಿಕೊಪ್ಪ,ಫೆ.12: ಸುಂಟಿಕೊಪ್ಪ ಶ್ರೀ ರಾಮ ಮಂದಿರದಲ್ಲಿ ಪಂಡಿತ್ ದೀನ್ ದಯಾಳ್ ಅವರ
ಸಂಸ್ಮಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಸುದೇವ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಪಿ.ಆರ್.ಸುನಿಲ್ ಕುಮಾರ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಕೆ.ಮೋಹನ್ ಪಂಡಿತ ದೀನ್ ದಯಾಳ್ ಅವರ ಸಮಾಜಮುಖಿ ಕಾರ್ಯದ ಬಗ್ಗೆ ಗುಣಗಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಗ್ರಾ.ಪಂ. ಸದಸ್ಯರುಗಳಾದ ಬಿ.ಎಂ.ಸುರೇಶ್, ವಸಂತಿ, ಶಾಂತಿ, ಮಂಜುಳ,ಗೀತಾ ಹಾಗೂ ಬಿಜೆಪಿ ಸದಸ್ಯರುಗಳಾದ ವಿಘ್ನೇಶ್, ಓಡಿಯಪ್ಪನ ಸುದೀಶ್, ರಾಕೇಶ್ ಹಾಗೂ ಕನೀಶ್ ಮತ್ತಿತರರು ಇದ್ದರು.

error: Content is protected !!