ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ದೃಢ ಕಲಶ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸ

February 12, 2021

ಮಡಿಕೇರಿ ಫೆ. 11 : ತಾಳತ್ತಮನೆಯ ಶ್ರೀ ದುರ್ಗಾಭಗವತಿ ದೇವಾಲಯದಲ್ಲಿ ದೃಢ ಕಲಶ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿದೆ.
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಇಂದು ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮುಂಜಾನೆಯಿಂದಲೇ ಗಣಪತಿ ಹೋಮ, ನವಕ, ಮಹಾಪೂಜೆ, ರಂಗಪೂಜೆ, ದೇವರ ಬಲಿ ಉತ್ಸವ, ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಿತು.

error: Content is protected !!