ಚಿಕ್ಕಅಳುವಾರ ಉಪನ್ಯಾಸಕ ಅರುಣಕುಮಾರ್ ರಿಗೆ ಪಿಎಚ್ಡಿ ಪದವಿ
February 12, 2021

ಮಡಿಕೇರಿ ಫೆ.12 : ಚಿಕ್ಕಅಳುವಾರ ಮಂಗಳೂರು ವಿವಿಯ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಇತಿಹಾಸ ಉಪನ್ಯಾಸಕ ಎಚ್.ಆರ್.ಅರುಣಕುಮಾರ್ ಅವರು ಪಿಎಚ್ಡಿ ಪದವಿಗೆ ಭಾಜನರಾಗಿದ್ದಾರೆ.
ಅರುಣಕುಮಾರ್ ಅವರು ಡಾ.ಇ.ಸಿ.ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ `ನಂಜನಗೂಡು ತಾಲೂಕಿನ ದೇವಾಲಯಗಳು ಮತ್ತು ಶಾಸನಗಳು-ಒಂದು ಸಾಂಸ್ಕøತಿಕ ಅಧ್ಯಯನ’ ಎಂಬ ಮಹಾಪ್ರಬಂಧವನ್ನು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಪಿಎಚ್ಡಿ ಪದವಿಗೆ ಮೈಸೂರು ವಿವಿ ಪಿಎಚ್ಡಿಗೆ ಅಂಗೀಕರಿಸಿದೆ.