ದೊಡ್ಡಮಳ್ತೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಕ್ಷೇತರರ ಪಾಲು

February 12, 2021

ಸೋಮವಾರಪೇಟೆ ಫೆ.12 : ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಕ್ಷೇತರ ಸದಸ್ಯರ ಪಾಲಾಗಿದೆ. ಅಧ್ಯಕ್ಷರಾಗಿ ಕೆ.ಎಂ.ಬಿಂದು, ಉಪಾಧ್ಯಕ್ಷರಾಗಿ ರಶೀದಾ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರ ಸ್ಥಾನಕ್ಕೆ ಬಿಂದು ಮತ್ತು ಪ್ರಮೀಳಾ ನಾಮಪತ್ರ ಸಲ್ಲಿಸಿದ್ದರು. ಬಿಂದು 5 ಮತಗಳನ್ನು ಪಡೆದರೆ, ಎಚ್.ಪಿ.ಪ್ರಮೀಳಾ 4 ಮತಗಳನ್ನು ಗಳಿಸಿ ಸೋತರು. ಉಪಾಧ್ಯಕ್ಷರಾಗಿ ರಶೀದಾ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ವಿ.ಬದಾಮಿ ಕಾರ್ಯನಿರ್ವಹಿಸಿದರು. ಸದಸ್ಯರಾದ ಕೆ.ಬಿ.ವೀಣಾ, ಎಚ್.ವಿ.ರುದ್ರಪ್ಪ, ಎನ್.ಜೆ.ಸತೀಶ್, ಡಿ.ಎಂ.ಗೋಪಾಲಕೃಷ್ಣ, ಭಾಗ್ಯ, ಎಚ್.ಈ.ಶಂಕರ, ಪಿಡಿಒ ಹೇಮಲತ ಹಾಜರಿದ್ದರು. ಜೆಡಿಎಸ್ ಮುಖಂಡರಾದ ಎಚ್.ಆರ್.ಸುರೇಶ್, ದಿವಾಕರ್, ಸಿ.ಎನ್.ಅಶೋಕ್, ಸಿ.ಈ.ವೆಂಕಟೇಶ್, ದಿನೇಶ್ ಮತ್ತಿತರರು ಇದ್ದರು.

error: Content is protected !!