ಚೌಡ್ಲು ಗ್ರಾ.ಪಂ ಅಧ್ಯಕ್ಷರಾಗಿ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಜಯಲಕ್ಷ್ಮೀ ಸುಬ್ರಮಣಿ ಆಯ್ಕೆ
February 12, 2021

ಸೋಮವಾರಪೇಟೆ ಫೆ.12 : ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ತಿಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ಜಯಲಕ್ಷ್ಮೀ ಸುಬ್ರಮಣಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಸಹಾಯಕರಾಗಿ ಪಿಡಿಓ ಪೂರ್ಣಕುಮಾರ್ ಅವರುಗಳು ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭ ಸದಸ್ಯರಾದ ನತೀಶ್ ಮಂದಣ್ಣ, ಗಣಪತಿ, ಪ್ರವೀಣ್, ವಿಶ್ವನಾಥ್, ಸುರೇಶ್ ಶೆಟ್ಟಿ, ಚೇತನ್, ಗೀತಾ, ಜ್ಯೋತಿ ನೆಹರು, ಭವಾನಿ, ಸತ್ಯ, ಆಶಾ ಯೋಗೇಂದ್ರ, ದಿವ್ಯ ಅವರುಗಳು ಭಾಗವಹಿಸಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಮಂಡಲ ಬಿಜೆಪಿ ಮಾಜೀ ಅಧ್ಯಕ್ಷ ಕುಮಾರಪ್ಪ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಪ್ರಮುಖರಾದ ಬನ್ನಳ್ಳಿ ಗೋಪಾಲ್, ತಾಕೇರಿ ಪೊನ್ನಪ್ಪ, ಜಿಲ್ಲಾ ಕಾರ್ಯದರ್ಶಿ ರೂಪಾ ಸತೀಶ್, ಯುವ ಮೋರ್ಚಾ ಅಧ್ಯಕ್ಷ ದರ್ಶನ್, ತಾಲೂಕು ಕಾರ್ಯದರ್ಶಿ ಕೊಮಾರಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.