ಬೇಳೂರು ಗ್ರಾ.ಪಂ ಅಧ್ಯಕ್ಷರಾಗಿ ಪ್ರಶಾಂತ್, ಉಪಾಧ್ಯಕ್ಷರಾಗಿ ಸುಜಾತ ಆಯ್ಕೆ

February 12, 2021

ಸೋಮವಾರಪೇಟೆ ಫೆ.12 : ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಜೆ.ಪಿ. ಬೆಂಬಲಿತ ಬಿ.ಎಂ.ಪ್ರಶಾಂತ್ ಹಾಗೂ ಉಪಾಧ್ಯಕ್ಷರಾಗಿ ಸುಜಾತ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈರ್ವರು ಅವಿರೋಧವಾಗಿ ಆಯ್ಕೆಯಾದರು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅವರು ಚುನಾವಣಾಧಿಕಾರಿಯಾಗಿ, ಪಿಡಿಓ ಅಂಜನ ಅವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭ ಸದಸ್ಯರುಗಳಾದ ತಿಮ್ಮಪ್ಪ ನಾಯಕ್, ಲತಾ, ಲಲಿತ, ಕನಕರಾಜು, ಕೆ.ಪಿ. ಸುದರ್ಶನ್, ಭಾಸ್ಕರ್, ಭಾಗೀರಥಿ, ಭರತ್ ರೈ, ಪುಷ್ಪಾವತಿ, ಸುಧಾ ಗಣೇಶ್, ಯೋಗೇಂದ್ರ, ಪಾರ್ವತಿ, ರೇಖಾ ಹರೀಶ್ ಅವರುಗಳು ಭಾಗವಹಿಸಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಸದಸ್ಯರಾದ ಶಿವಪ್ಪ, ವೆಂಕಪ್ಪ, ಪ.ಪಂ. ಅಧ್ಯಕ್ಷೆ ನಳಿನಿ ಗಣೇಶ್, ಶಕ್ತಿ ಕೇಂದ್ರದ ಪ್ರಮುಖ್ ಬಿ.ಜಿ. ಪ್ರಶಾಂತ್, ಸಹ ಪ್ರಮುಖರ್ ಕೆ.ಪಿ. ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!