ಸಹಕಾರ ಸಂಘ ಶಿಕ್ಷಣ ಕಾರ್ಯಕ್ರಮ : ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಅಗತ್ಯ : ಮನುಮುತ್ತಪ್ಪ ಅಭಿಪ್ರಾಯ

February 12, 2021

ಮಡಿಕೇರಿ ಫೆ.12 : ರೈತರಿಗೆ ಆಧುನಿಕ ಕೃಷಿ ಪದ್ದತಿಯ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು ಮತ್ತು ವಿಜ್ಞಾನದ ಮಹತ್ವವನ್ನು ತಿಳಿಸಿ, ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಬದಲಾವಣೆ ಅಳವಡಿಸಿಕೊಳ್ಳಲು ಸಹಾಯ ಮಾಡಬೇಕಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷರಾದ ಎ.ಕೆ.ಮನು ಮುತ್ತಪ್ಪ ಅವರು ಹೇಳಿದರು.
ನಗರದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಟ್ಟಣ ಸಹಕಾರ ಸಂಘಗಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಿಬ್ಬಂದಿ ಸೇವಾ ನಿಯಮ ಕುರಿತು ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶವ್ಯಾಪಿ ಕೊರೊನಾ ಕೇವಲ ಜನರ ಮೇಲೆ ಮಾತ್ರ ಪರಿಣಾಮ ಬೀರದೆ, ದೈನಂದಿನ ಜೀವನ ಹಾಗೂ ಉದ್ಯೋಗದ ಮೇಲೆ ತನ್ನ ಹಿಡಿತ ಸಾಧಿಸಿತು. ಅದರ ಪರಿಣಾಮ ಐಟಿಬಿಟಿ ಕಂಪೆನಿಗಳ ಶೇ.30-40 ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಲಾಯಿತು. ಅದರಂತೆಯೆ ದೇಶದ ಎಷ್ಟೋ ಜನರ ಬದುಕು ಕಷ್ಟಕರವಾಗಿದೆ ಎಂದರು.
ಕೊಡಗು ನೈಸರ್ಗಿಕ ವಿಕೋಪದಿಂದ ಕಂಗೆಟ್ಟು ಇನ್ನೇನು ಎಚ್ಚೆತ್ತುಕೊಳ್ಳುವ ಸಂದರ್ಭದಲ್ಲಿ ಕೊರೊನಾ ಮಹಾಮಾರಿ ಜನರ ನಿದ್ರೆ ಗೆಡಿಸಿತ್ತು. ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತವಾಗಿತ್ತು. ಇಂತಹ ಸಂದರ್ಭದಲ್ಲಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಹೇಳಿದರು.
ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ರೈತರ ಪಾತ್ರ ಮಹತ್ವದಾಗಿದೆ. ರೈತರು ಇಂದಿನ ಮಾರುಕಟ್ಟೆಗೆ ಸೂಚಿತವಾಗಿ ಬೆಳೆ ಬೆಳೆಯಬೇಕು. ಇಲ್ಲದಿದ್ದಲ್ಲಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಮತ್ತು ಭಾರತದಲ್ಲಿ ಗೋಧಿ ಅವಶ್ಯಕತೆಗಿಂತ ಹೆಚ್ಚಾಗಿ ಬೆಳೆಯಲಾಗುತ್ತದೆ. ಖರೀದಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಹೀಗೆ ಬೇಡಿಕೆಯ ಕುಸಿತ ಕಂಡುಬರುತ್ತದೆ ಹೀಗಾದಾಗ ರೈತರು ಸಂಕಷ್ಟಕ್ಕೆ ಒಳಪಡುತ್ತಾರೆ. ಆದ್ದರಿಂದ ಬೆಳೆ ಬೆಳೆಯುವಾಗ ಸಂಶೋಧನೆ ಮಾಡುವುದು ಅವಶ್ಯಕವಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ ಅವರು ಹೇಳಿದರು.
ತುಮಕೂರಿನ ಜಿಲ್ಲಾ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಆದಿಶೇಷಮೂರ್ತಿ ಅವರು ಕೃಷಿಕರು ರಾಷ್ಟ್ರದ ಬೆನ್ನೆಲುಬು, ಮುಖ್ಯವಾಗಿ ಶಿಕ್ಷಣ ಅಗತ್ಯವಿರುವುದು ಕೃಷಿಕರಿಗೆ, ಅದರಲ್ಲೂ ಸಾಮಾನ್ಯ ಶಿಕ್ಷಣ ಮಾತ್ರವಲ್ಲದೆ ವೈಜ್ಞಾನಿಕ ಶಿಕ್ಷಣ ನೀಡಬೇಕಾದ ಅವಶ್ಯಕತೆ ಈಗಿನ ಕೃಷಿಕರಿಗೆ ಇದೆ ಎಂಬುವುದಾಗಿ ಸಿಬ್ಬಂದಿ ಸೇವಾ ನಿಯಮದ ಕುರಿತು ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾದ ಪಿ.ಸಿ.ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಗಮದ ನಿರ್ದೇಶಕರಾದ ವಿ.ಕೆ.ಅಜಯ್ ಕುಮಾರ್, ಪಿ.ವಿ.ಭರತ್, ಎನ್.ಎ.ರವಿಬಸಪ್ಪ, ಪಿ.ವಿ.ಭರತ್ ಇತರರು ಇದ್ದರು.

error: Content is protected !!