ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ : ಬಿಜೆಪಿ ಘೋಷಿತ ಅಭ್ಯರ್ಥಿಗಳನ್ನೇ ಸೋಲಿಸಿದ ಬಿಜೆಪಿಗರು

February 13, 2021

*ಸಿದ್ದಾಪುರ ಫೆ.13 : ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ ಅಧ್ಯಕ್ಷರಾಗಿ ಪಕ್ಷೇತರರ ಬೆಂಬಲದಿಂದ ಬಿಜೆಪಿ ಬೆಂಬಲಿತ ಅನಿತಾ ಹಾಗೂ ಉಪಾಧ್ಯಕ್ಷರಾಗಿ ಸುಧಾ ಆಯ್ಕೆಯಾಗಿದ್ದಾರೆ.
ಒಟ್ಟು 11 ಸದಸ್ಯ ಬಲದ ಗ್ರಾ.ಪಂ ಯಲ್ಲಿ ಬಿಜೆಪಿ ಬೆಂಬಲಿತ 8 ಮತ್ತು ಮೂವರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ ಅಧಿಕೃತವಾಗಿ ಅಧ್ಯಕ್ಷ ಸ್ಥಾನಕ್ಕೆ ವಿಶಾಲ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಮುನಾ ಅವರನ್ನು ಕಣಕ್ಕಿಳಿಸಿತ್ತು. ಆದರೆ ಕಳೆದ 25 ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಿಂದ ಅಭ್ಯತ್‍ಮಂಗಲದ ವಾರ್ಡ್ ನಂ.1 ವಂಚಿತವಾಗಿದೆ ಎಂದು ಬಿಜೆಪಿ ಬೆಂಬಲಿತ ಅನಿತಾ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಧಾ ಅವರುಗಳು ಕೂಡ ಸ್ಪರ್ಧೆಗಿಳಿದರು.
ಅಂತಿಮವಾಗಿ ಚುನಾವಣೆ ನಡೆದು ಮೂವರು ಪಕ್ಷೇತರರಾದ ಭುವನೇಂದ್ರ, ಮಂಜುಳ ಹಾಗೂ ಜಯಲಕ್ಷ್ಮಿ ಅವರುಗಳ ಬೆಂಬಲದೊಂದಿಗೆ ತಲಾ ಆರು ಮತಗಳನ್ನು ಪಡೆದು ಅನಿತಾ ಹಾಗೂ ಸುಧಾ ಗೆಲವು ಸಾಧಿಸಿದರು. ಬಿಜೆಪಿಯ ಅಧಿಕೃತ ಅಭ್ಯರ್ಥಿಗಳು ಸೋಲು ಅನುಭವಿಸಿದರು.
ಅಧ್ಯಕ್ಷ ಸ್ಥಾನ ಬಿಸಿಎಂಎ ಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕಾರಣ ಈ ಬಾರಿಯಾದರೂ ನಮಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಿ ಎಂದು ಬಿಜೆಪಿ ಪ್ರಮುಖರ ಬಳಿ ಆರೂ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಕಂಡ ಅಭ್ಯತ್‍ಮಂಗಲದ ವಾರ್ಡ್ ನಂ.1 ರ ಸದಸ್ಯರುಗಳು ಬೇಡಿಕೆ ಇಟ್ಟಿದ್ದರು. ಆದರೆ ಪಕ್ಷ ಇದಕ್ಕೆ ಸ್ಪಂದನೆ ನೀಡದ ಕಾರಣ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು.
ಸೋಮವಾರಪೇಟೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪಂಚಾಯಿತಿ ಪಿಡಿಒ ಅನಿಲ್ ಕುಮಾರ್ ಹಾಗೂ ಕಾರ್ಯದರ್ಶಿ ರವಿ ಹಾಜರಿದ್ದರು.

error: Content is protected !!