ಚೆಟ್ಟಳ್ಳಿ- ಸುಂಟಿಕೊಪ್ಪ ರಸ್ತೆ ವಿಸ್ತರಣೆಗೆ ಚಾಲನೆ

February 13, 2021

*ಸಿದ್ದಾಪುರ ಫೆ.13 : ಚೆಟ್ಟಳ್ಳಿ- ಸುಂಟಿಕೊಪ್ಪ ರಸ್ತೆಯ ವಿಸ್ತರಣೆ ಮತ್ತು ಡಾಂಬರೀಕರಣ ಕಾರ್ಯಕ್ಕೆ ಚಾಲನೆ ದೊರೆತ್ತಿದೆ. ಸುಮಾರು 2 ಕೋಟಿ ರೂ.ಗಳ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಗುಣಮಟ್ಟದ ಕಾಮಗಾರಿಗೆ ಸೂಚನೆ ನೀಡಿದರು. ಜಿ.ಪಂ ಸದಸ್ಯೆ ಸುನಿತಾ, ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ, ಚೆಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಮುತ್ತಪ್ಪ, ಸದಸ್ಯ ಮುಳ್ಳಂಡ ಅಂಜನ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಕಂಠಿ ಕಾರ್ಯಪ್ಪ, ಸಹ ಪ್ರಮುಖ್ ನೂಜಿಬೈಲು ಜಗತ್, ಎನ್.ಎಸ್.ರವಿ, ತಾಲ್ಲೂಕು ಕಾರ್ಯದರ್ಶಿ ಮೇರಿ ಅಂಬುದಾಸ್, ಪ್ರಮುಖರಾದ ಸಿದ್ದಿಕಲ್, ಅರುಣ ಮತ್ತಿತರರು ಹಾಜರಿದ್ದರು.

error: Content is protected !!