ಜಾನಪದ ಪರಿಷತ್ ಕುಶಾಲನಗರ ಘಟಕದ ಅಧ್ಯಕ್ಷರಾಗಿ ಎಂ.ಎನ್.ಚಂದ್ರಮೋಹನ್ ಆಯ್ಕೆ

13/02/2021

ಮಡಿಕೇರಿ ಫೆ.13 : ಕರ್ನಾಟಕ ಜಾನಪದ ಪರಿಷತ್ ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎಂ.ಎನ್.ಚಂದ್ರಮೋಹನ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕುಶಾಲನಗರದಲ್ಲಿ ನಡೆದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ಪುನರ್ ರಚನೆ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಕಾರ್ಯಾಧ್ಯಕ್ಷರಾಗಿ ಫ್ಯಾನ್ಸಿ ಮುತ್ತಣ್ಣ, ಉಪಾಧ್ಯಕ್ಷರುಗಳಾಗಿ ಪೊನ್ನಚ್ಚನ ಮೋಹನ್, ವಿದ್ವಾನ್ ಬಿ.ಸಿ.ಶಂಕ್ರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾ.ತಿ.ಜಯಪ್ರಕಾಶ್, ಕಾರ್ಯದರ್ಶಿಯಾಗಿ ಎಚ್.ವಿ.ವಿನೋದ್, ಖಜಾಂಚಿಯಾಗಿ ಸುನಿತಾ ಲೋಕೇಶ್ ಅವರನ್ನು ನೇಮಿಸಲಾಯಿತು.
ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಪದ್ಮ ಪುರುಷೋತ್ತಮ್, ಡಿ.ಆರ್.ಸೋಮಶೇಖರ್, ಬಿ.ಎಸ್.ಪರಮೇಶ್, ವನಿತಾ ಚಂದ್ರಮೋಹನ್, ಸಲಹೆಗಾರರಾಗಿ ಕೆ.ಎಸ್.ರತೀಶ್, ಎಂ.ಎಸ್.ಚಿಣ್ಣಪ್ಪ ಅವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ಪರಿಷತ್‍ನ ಜಿಲ್ಲಾ ಖಜಾಂಚಿ ಸಂಪತ್‍ಕುಮಾರ್ ಸರಳಾಯ, ಸೋಮವಾರಪೇಟೆ ಹೋಬಳಿ ಘಟಕದ ಅಧ್ಯಕ್ಷರಾದ ಎಸ್.ಎ.ಮುರಳೀಧರ್, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಕಾಶ್, ಕಾರ್ಯದರ್ಶಿ ವಿಜಯ್ ಹಾನಗಲ್, ರುಬೀನಾ ಮತ್ತಿತರರು ಇದ್ದರು.