ಸಮಸ್ಯೆಗಳಿಗೆ ಸ್ಪಂದನೆ : ವಾರ್ಡ್‍ಗಳಿಗೆ ಭೇಟಿ ನೀಡಲು ಮಡಿಕೇರಿ ಹಿತರಕ್ಷಣಾ ವೇದಿಕೆ ನಿರ್ಧಾರ

February 13, 2021

ಮಡಿಕೇರಿ ಫೆ.13 : ಚುನಾಯಿತ ಪ್ರತಿನಿಧಿಗಳಿಲ್ಲದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮಡಿಕೇರಿ ನಗರಸಭಾ ವ್ಯಾಪ್ತಿಯ 23 ವಾರ್ಡ್‍ಗಳಿಗೆ ಭೇಟಿ ನೀಡಲಿ ಜನರ ಅಹವಾಲುಗಳನ್ನು ಅಧಿಕಾರಿಗಳಿಗೆ ತಲುಪಿಸುವ ಕಾರ್ಯವನ್ನು ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಮಾಡಲಿದೆ ಎಂದು ವೇದಿಕೆಯ ಅಧ್ಯಕ್ಷ ರವಿಗೌಡ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿರುವ ವೇದಿಕೆ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇನ್ನು ಮುಂದೆ ಎಲ್ಲಾ 23 ವಾರ್ಡ್‍ಗಳಿಗೆ ಭೇಟಿ ನೀಡಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದ್ದಾರೆ.
ಕುಡಿಯುವ ನೀರು, ವಿದ್ಯುತ್, ಶುಚಿತ್ವ, ರಸ್ತೆ, ಚರಂಡಿ ಸಮಸ್ಯೆ ಸೇರಿದಂತೆ ವಿವಿಧ ಅರ್ಜಿಗಳ ವಿಲೇವಾರಿ ಬಾಕಿ ಇದ್ದರೂ ತಮ್ಮ ಗಮನ ಸೆಳೆಯಬಹುದಾಗಿದೆ. ಸರ್ಕಾರದ ನಿಯಮಾನುಸಾರ ಪರಿಹಾರ ಮಾಡಲು ಸಾಧ್ಯವಾಗಬಹುದಾದ ಸಮಸ್ಯೆಗಳ ಕುರಿತು ನಗರಸಭಾ ಅಧಿಕಾರಿಗಳ ಗಮನ ಸೆಳೆಯಲಾಗುವುದು ಮತ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಮ್ಮ ಕಾರ್ಯದೊಂದಿಗೆ ಶಿವರಾಮೇಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಕೈಜೋಡಿಸಲಿದೆ ಎಂದು ರವಿಗೌಡ ತಿಳಿಸಿದ್ದಾರೆ. ವಿವಿಧ ವಾರ್ಡ್‍ಗಳ ನಿವಾಸಿಗಳು ಮೂಲಭೂತ ಸಮಸ್ಯೆಗಳಿದ್ದಲ್ಲಿ ಮೊ.ಸಂ : 96111 01070 ಗೆ ಕರೆ ಮಾಡಬಹುದೆಂದು ಹೇಳಿದ್ದಾರೆ.

error: Content is protected !!