ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ‘ಸಾಮಾಜಿಕ ಅರಿವಿನ ಸಾಂಸ್ಕøತಿಕ ಕಾರ್ಯಕ್ರಮ’

February 13, 2021

ಮಡಿಕೇರಿ ಫೆ.13 : ಅರಣ್ಯವಾಸಿ ಆದಿವಾಸಿಗಳು ಅತ್ಯಂತ ಮುಗ್ದರಿದ್ದಾರೆ. ಇವರ ಮುಗ್ದತೆ ದುರುಪಯೋಗವಾಗದಿರಲಿ ಎಂದು ನಿಟ್ಟೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಚೆಕ್ಕೆರ ಸೂರ್ಯ ಅಯ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ರಂಗಾಯಣ, ಮೈಸೂರು ವನವಾಸಿ ಕಲ್ಯಾಣ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಗಿರಿಜನ ಉಪಯೋಜನೆಯಡಿ ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯ್ತಿ ಸಮೀಪವಿರುವ ಯುವಕ ಸಂಘದ ಸಭಾಂಗಣದಲ್ಲಿ ಆಯೋಜಿತ ‘ಸಾಮಾಜಿಕ ಅರಿವಿನ ಸಾಂಸ್ಕøತಿಕ ಕಾರ್ಯಕ್ರಮ’ ಮತ್ತು ಆದಿವಾಸಿಗಳಲ್ಲಿ ಸಾಮಾಜಿಕ ಅರಿವಿನ ಕುರಿತ ನಾಟಕ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆದಿವಾಸಿಗಳ ಮುಗ್ದತೆಯನ್ನು ಕೆಲವು ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂದಿಗೂ ಕೂಡ ನ್ಯಾಯಬದ್ಧವಾಗಿ ಆದಿವಾಸಿಗಳಿಗೆ ಸಿಗಬೇಕಾದ ಸವಲತ್ತುಗಳು ತಲುಪುತ್ತಿಲ್ಲ. ಈ ಬಗ್ಗೆ ಆದಿವಾಸಿಗಳು ಜಾಗೃತರಾಗÀಬೇಕು. ನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗಿರಿಜನರು ತೊಡಗಿಸಿಕೊಳ್ಳಲು ಇಂತಹ ಬೀದಿ ನಾಟಕಗಳು ಸಹಕಾರಿಯಾಗಿವೆ ಎಂದರು.
ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಕಲಾವಿದರಿಗೆ ಪ್ರಶಂಸಾ ಪತ್ರ ವಿತರಿಸಿ, ಗಿರಿಜನ ಉಪಯೋಜನೆಯಡಿ ಆದಿವಾಸಿಗಳಿಗೆ ರಂಗಾಯಣದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಸಲು ಅವಕಾಶವಿದೆ.ಇದೇ ಮೊದಲ ಬಾರಿಗೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಆದಿವಾಸಿಗಳು ನೆಲೆಸಿರುವ ಪ್ರದೇಶದಲ್ಲಿ ಆದಿವಾಸಿಗಳಿಗೆ ನಾಟಕಗಳನ್ನು ಕಲಿಸುವ ಮೂಲಕ ಪ್ರೋತ್ಸಾಹ ಮಾಡಲಾಗುತ್ತಿದೆ. ಆದಿವಾಸಿಗಳಲ್ಲಿ ಜಾಗೃತಿ ಮೂಡಿಸುವುದು, ಶಿಕ್ಷಣದ ಬಗ್ಗೆ ಜಾಗೃತಿಗಾಗಿ,ಸಾಮಾಜಿಕ ಪ್ರಜ್ಞೆ ಮೂಡಿಸಲು, ಜ್ಞಾನ ಹೆಚ್ಚಿಸಲು ರಂಗಾಯಣದಲ್ಲಿ ಅನುದಾನವಿದ್ದು ಇದನ್ನು ಇವರಿಗಾಗಿಯೇ ಬಳಕೆ ಮಾಡಬೇಕೆಂಬ ನಿಯಮವಿದೆ ಈ ನಿಯಮದಡಿ ಇವರಿಗೆ ಮೀಸಲಿರಿವ ಅನುದಾನವನ್ನು ಸದ್ಬಳಕೆ ಮಾಡಿ ಕಾರ್ಯಕ್ರಮವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತಿ- ಮೈಸೂರು ರಂಗಾಯಣದ ಮೂಲಕ ಆದಿವಾಸಿಗಳ ಯುವಕ ಯುವತಿಯರಿಗೆ ನಾಟಕಗಳನ್ನು ಕಲಿಸುವ ಮೂಲಕ ವಿಶೇಷ ಪ್ರಯತ್ನ ನಡೆಸಲಾಯಿತು. 10 ಜನರ ತಂಡವು 15 ದಿನಗಳ ಕಾಲ ಬೊಮ್ಮಾಡು ಗಿರಿಜನ ಹಾಡಿಯಲ್ಲಿ ನಾಟಕ ನಿರ್ದೇಶಕರಾದ ಮೈಸೂರಿನ ನಾ.ಶ್ರೀನಿವಾಸ್ ಹಾಗೂ ವಿರಾಜಪೇಟೆಯ ಕರ್ನಾಟಕ ನಾಟಕ ಆಕಾಡೆಮಿ ಸದಸ್ಯರಾದ ರಾಧ ಸಂಚಾಲಕತ್ವದಲ್ಲಿ ಬೀದಿ ನಾಟಕವನ್ನು ತರಬೇತಿಯ ಮೂಲಕ ಪಡೆದು 15ಕ್ಕೂ ಹೆಚ್ಚಿನ ಹಾಡಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಬಿ.ಎನ್.ಪ್ರಥ್ಯು, ನಿಟ್ಟೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಪಡಿಞರಂಡ ಕವಿತಾ ಪ್ರಭು, ವನವಾಸಿ ಕಲ್ಯಾಣ ಕೇಂದ್ರದ ಅಧ್ಯಕ್ಷರಾದ ಪ್ರಕಾಶ್, ನಾಟಕ ನಿರ್ದೇಶಕರಾದ ನಾ.ಶ್ರೀನಿವಾಸ್, ಕರ್ನಾಟಕ ನಾಟಕ ಆಕಾಡೆಮಿಯ ಸದಸ್ಯರಾದ ರಾಧ,ಕೊಡವ ಸಾಹಿತ್ಯ ಆಕಾಡೆಮಿಯ ನಿರ್ದೇಶಕರಾದ ಪಡಿಞರಂಡ ಪ್ರಭು ಮೊದಲಾದವರಿದ್ದರು.

error: Content is protected !!