ಸಾಹಿತಿ ಸುಬ್ಬಮ್ಮ ತಿಮ್ಮಯ್ಯ ನಿಧನಕ್ಕೆ ಸಂತಾಪ

February 13, 2021

ಮಡಿಕೇರಿ ಫೆ.13 : ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿರುವ ಹಿರಿಯ ಸಾಹಿತಿ ಚುಟುಕು ರತ್ನ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಅವರು(91) ನಿಧನರಾಗಿದ್ದಾರೆ.
::: ಸಂತಾಪ :::
ಇವರ ಅಗಲಿಕೆಗೆ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೊಡಗು ಜಿಲ್ಲಾ ಲೇಖಕರು ಮತ್ತು ಕಲಾವಿದರ ಬಳಗದ ಹಾಗೂ ಕೊಡವ ಎಳ್ತಕಾರಡ ಕೂಟದ ಪರವಾಗಿ ಪೆÇನ್ನಂಪೇಟೆಯಲ್ಲಿ ಸಂತಾಪ ಸಭೆ ನಡೆಸಿ ಶೃದ್ಧಾಂಜಲಿ ಅರ್ಪಿಸಲಾಯಿತು.
ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮುಲ್ಲೆಂಗಡ ಮಧೋಶ್ ಪೂವಯ್ಯ, ಪರಿಷತ್ತಿನ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡಗು ಜಿಲ್ಲಾ ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಡಾ.ಮುಲ್ಲೆಂಗಡ ರೇವತಿ ಪೂವಯ್ಯ, ಅಖಿಲ ಕೊಡವ ಸಮಾಜದ ಯುವ ಘಟಕದ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಜೆ.ಸಿ ಸಂಸ್ಥೆಯ ಮಾಜಿ ಅಧ್ಯಕ್ಷ ಮೂಡಗದ್ದೆ ವಿಕ್ರಮ್, ನಿವೃತ್ತ ಅಧ್ಯಾಪಕರುಗಳಾದ ಕಾಳಿಮಾಡ ಮೋಟಯ್ಯ ಹಾಗೂ ಚೇಮಿರ ಭೀಮಯ್ಯ ಅವರುಗಳು ಹಾಜರಿದ್ದು ಸಂತಾಪ ಸೂಚಿಸಿದರು.

error: Content is protected !!