ಮಡಿಕೇರಿ ತಾಲ್ಲೂಕು ಜಾನಪದ ಯುವ ಬಳಗ ಅಸ್ತಿತ್ವಕ್ಕೆ

February 13, 2021

ಮಡಿಕೇರಿ ಫೆ.13 : ಮಡಿಕೇರಿ ತಾಲೂಕು ಜಾನಪದ ಪರಿಷತ್ ಗೆ ಹೊಸದ್ದಾಗಿ ಯುವ ಬಳಗವನ್ನು ಸೇರ್ಪಡೆಗೊಳಿಸಲಾಗಿದ್ದು ಈ ಮೂಲಕ ಯುವಪೀಳಿಗೆಯ ಜಾನಪದ ಕಲಾವಿದರು, ಯುವ ಕಲಾಸಕ್ತರಿಗೆ ಸೂಕ್ತ ವೇದಿಕೆ ಕಲ್ಪಿಸಲು ಜಾನಪದ ಪರಿಷತ್ ಮುಂದಾಗಿದೆ.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಭೆಯು ನಗರದ ಲಯನ್ಸ್ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷ ಅನಿಲ್ ಎಚ್.ಟಿ. ಅಧ್ಯಕ್ಷತೆಯಲ್ಲಿ ಜರುಗಿತು.
::: ಜಾನಪದ ಯುವ ಬಳಗ :::
ನೂತನವಾಗಿ ಅಸ್ತಿತ್ವಕ್ಕೆ ಬಂದ ಮಡಿಕೇರಿ ತಾಲ್ಲೂಕು ಜಾನಪದ ಯುವ ಬಳಗದ ಸಂಚಾಲಕರಾಗಿ ಗಾಯತ್ರಿ ಚೆರಿಯಮನೆ, ಶ್ರೀರಕ್ಷಾ ಪ್ರಭಾಕರ್, ಸ್ವಪ್ನ ಮಧುಕರ್ ಶೇಟ್, ಸ್ನೇಹಾ ಮಧುಕರ್ ಶೇಟ್, ಸುಪ್ರಿತಾ, ಯಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ. ಯುವ ಕಲಾವಿದರಿಗೂ ಈ ಬಳಗದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ತಿಳಿಸಿದೆ.
ಈ ಸಂದರ್ಭ ಮಾತನಾಡಿದ ಅನಿಲ್, ಪುರಾತನವಾದ ಜಾನಪದ ಸಂಸ್ಕøತಿಯನ್ನು ಭವಿಷ್ಯಕ್ಕೂ ರಕ್ಷಿಸುವ ನಿಟ್ಟಿನಲ್ಲಿ ಯುವಪೀಳಿಗೆಯಲ್ಲಿ ಜಾನಪದದ ಬಗೆಗೆ ಆಸಕ್ತಿ ಬೆಳೆಸಬೇಕಾದ ಅಗತ್ಯ ಇದೆ. ಅನೇಕ ಯುವಕ, ಯುವತಿಯರು ಜಾನಪದದ ಬಗ್ಗೆ ಆಸಕ್ತರಾಗಿದ್ದಾರೆ. ಹೀಗಾಗಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಜಾನಪದ ಯುವ ಬಳಗವನ್ನು ಸ್ಥಾಪಿಸಿ ಯುವ ಕಲಾವಿದರಿಗೆ ಸೂಕ್ತ ಅವಕಾಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಲಾಕಾಲೇಜುಗಳಲ್ಲಿ ಜಾನಪದ ಯುವ ಬಳಗ ಪ್ರಾರಂಭಿಸುವ ಚಿಂತನೆಯಿದೆ ಎಂದು ಪ್ರಕಟಿಸಿದರು.
ತಾಲ್ಲೂಕು ಜಾನಪದ ಪರಿಷತ್ ನ ಕಾರ್ಯಕ್ರಮ ಸಂಯೋಜಕಿ ಕೆ.ಜಯಲಕ್ಷ್ಮಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಕಲಾವಿದರಿಗೆ ಪೆÇ್ರೀತ್ಸಾಹ ನೀಡುತ್ತಿದೆ. ಇದೀಗ ಯುವ ಜಾನಪದ ಘಟಕದ ಸ್ಥಾಪನೆ ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ ಎಂದು ಶ್ಲಾಘಿಸಿದರು.
ತಾಲೂಕು ಜಾನಪದ ಪರಿಷತ್ ಖಚಾಂಜಿ ನವೀನ್ ಅಂಬೆಕಲ್ ಮಾತನಾಡಿ, ತಾಲೂಕು ಜಾನಪದ ಪರಿಷತ್ ಈವರೆಗೆ ಜಾನಪದ ನೃತ್ಯ ಸ್ಪರ್ಧೆ, ಜಾನಪದ ಕ್ರೀಡೋತ್ಸವ, ಚಿತ್ರಕಲಾ ಪ್ರದರ್ಶನ, ಪುರಾತನ ಅಮೂಲ್ಯ ಜಾನಪದ ವಸ್ತು ಸಂಗ್ರಹದ ಪ್ರದರ್ಶನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿಯೂ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಪ್ರಭಾಕರ್, ಸ್ವೇಹ, ಸಪ್ನ ಮಧುಕರ್ ಅವರಿಂದ ಆಕರ್ಷಕ ಗೀತಗಾಯನ ಆಯೋಜಿತವಾಗಿತ್ತು. ಜಿಲ್ಲಾ ಜಾನಪದ ಪರಿಷತ್ ನ ನಿರ್ದೇಶಕ ಪಿ.ಆರ್.ರಾಜೇಶ್, ವೀಣಾಕ್ಷಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.

error: Content is protected !!