ವಿಚ್ಛೇದನಕ್ಕೆ ಏಕರೂಪ ಕಾನೂನು : ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ

February 13, 2021

ನವದೆಹಲಿ ಫೆ.13 : ಅಡ್ವೊಕೇಟ್ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸಂವಿಧಾನದ ಆರ್ಟಿಕಲ್ 14, 15, 21 ಹಾಗೂ 44 ಅಡಿಯಲ್ಲಿ ವೈಯಕ್ತಿಕ ಕಾನೂನುಗಳ ಪ್ರಯೋಗ ಸಾಧ್ಯವಿಲ್ಲ ಆದ್ದರಿಂದ ವಿಚ್ಛೇದನಕ್ಕೆ ದೇಶದ ಎಲ್ಲಾ ನಾಗರಿಕರಿಗೂ ಏಕರೂಪ ಕಾನೂನು ಅನ್ವಯವಾಗಬೇಕೆಂದು ಕೋರಿದ್ದರು.
ಆದರೆ ವಿಚ್ಛೇದನಕ್ಕೆ ಏಕರೂಪ ಕಾನೂನು, ಆಧಾರಗಳನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿರೋಧಿಸಿ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

error: Content is protected !!