ಶ್ರೀರಾಮ ಮಂದಿರ ನಿರ್ಮಾಣ : ಬೇಟೋಳಿ ಮಂಡಲದಿಂದ 1.87 ಲಕ್ಷ ರೂ. ಸಂಗ್ರಹ

February 14, 2021

ಮಡಿಕೇರಿ ಫೆ.14 : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿರಾಜಪೇಟೆಯ ಬೇಟೋಳಿ ಮಂಡಲದ ವತಿಯಿಂದ ಒಟ್ಟು 1.87 ಲಕ್ಷ ರೂ. ಗಳನ್ನು ಸಂಗ್ರಹಿಸಲಾಗಿದೆ.
ಬೇಟೋಳಿ ವಲಯದ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಾಗೂ ಇತರ ಹಿಂದೂ ಸಂಘಟನೆಗಳ ಸದಸ್ಯರುಗಳು ಬೇಟೋಳಿ, ರಾಮನಗರ, ಹೆಗ್ಗಳ, ಬೂದಿಮಾಳ, ಆರ್ಜಿ ಗ್ರಾಮ ಸೇರಿದಂತೆ ವಿವಿಧೆಡೆ ಸುಮಾರು 20 ದಿನಗಳ ಕಾಲ ನಿಧಿ ಸಂಗ್ರಹ ಕಾರ್ಯ ನಡೆಸಿದರು.

error: Content is protected !!