ಹೆಬ್ಬಾಲೆಯಲ್ಲಿ ಅಭಿನಂದನಾ ಸಮಾರಂಭ : ನಿರಂತರ ಅಧ್ಯಯನದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ : ಐಎಎಸ್ ಅಧಿಕಾರಿ ಕೆ.ನಾಗೇಂದ್ರ ಪ್ರಸಾದ್

February 14, 2021

ಕುಶಾಲನಗರ ಫೆ.14 : ಧೃಡ ಮನಸ್ಸು ಹಾಗೂ ನಿರಂತರ ಅಧ್ಯಯನದಿಂದ ಮಾತ್ರ ನಿರ್ದಿಷ್ಟ ಗುರಿಮುಟ್ಟಲು ಸಾಧ್ಯ ಎಂದು ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಐಎಎಸ್ ಅಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು. ಹೆಬ್ಬಾಲೆ ಅಂಬೇಡ್ಕರ್ ಅಭಿವೃದ್ಧಿ ವೇದಿಕೆ ಹಾಗೂ ಗ್ರಾಮಸ್ಥರ ವತಿಯಿಂದ ಕುಶಾಲನಗರ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ನಾನು ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ಸಣ್ಣ  ಅಳಕು ಇತ್ತು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕನ್ನಡದಲ್ಲಿ ಮಾದ್ಯಮದಲ್ಲಿ ಓದಿದವನು ಇಂತಹ ದೊಡ್ಡ ಹುದ್ದೆಯನ್ನು ನಿಭಾಹಿಸುವುದು ಹೇಗೆ ಎಂಬ ಪ್ರಶ್ನೆ ಕಾಡಿತು.ಆದರೆ ಆ ಸ್ಥಾನವನ್ನು ಅಲಂಕರಿಸಿದ ನಂತರ ಬಂದ ಆತ್ಮವಿಶ್ವಾಸ ನನ್ನನ್ನು ಯಶಸ್ಸಿನ ಹಾದಿಗೆ ಕರೆದುಕೊಂಡು ಹೋಯಿತು. ಒಬ್ಬ ಅಧಿಕಾರಿಗೆ ಹೃದಯವಂತಿಕೆ ಇರಬೇಕು. ನಮ್ಮ ಬಳಿಕೆ ಬರುವ ಜನರ ಬಗ್ಗೆ ಅನುಕಂಪ ಹಾಗೂ ವಾತ್ಸಲ್ಯವನ್ನು ತೋರುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರವನ್ನು ಕಲ್ಪಿಸಿದ್ದೇನೆ. ಜನಸಾಮಾನ್ಯ ಸೇವೆ ಮಾಡುವ ಭಾಗ್ಯ ನನಗೆ ತೃಪ್ತಿ ತಂದಿಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜವಬ್ದಾರಿ ನನ್ನ ಮೇಲಿಗೆ ಅದನ್ನು ಸಾಮರ್ಥವಾಗಿ ನಿಭಯಿಸುತ್ತೇನೆ ಎಂದರು. ಗ್ರಾಮದ ಜನರು ನನಗೆ ನೀಡಿದ ಸನ್ಮಾನಕ್ಕೆ ನಾನು ಅಭರಿಯಾಗಿದ್ದೇನೆ. ಸನ್ಮಾನಗಳು ತನ್ನ ಜವಬ್ದಾರಿಯನ್ನು ಹೆಚ್ಚಿಸಿದೆ. ಹಿರಿಯರ ಹಾಗೂ ಸ್ವಾಮೀಜಿಗಳ ಆಶೀವರ್ಾದ ಹಾಗೂ ಮಾರ್ಗದರ್ಶನ ಪಡೆಯುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.ಅಖಿಲ ಭಾರತ ಸೇವೆ ಎನ್ನುವುದು ಯುವ ಪೀಳಿಗೆಯ ಕನಸ್ಸಾಗಿದೆ. ಪ್ರತಿ ಮನೆಯಲ್ಲೂ ಒಬ್ಬ ಐಎಎಸ್ ಅಧಿಕಾರಿಗಳು ಇರಬೇಕು. ಆದರೆ ವಿದ್ಯಾವಂತ ಯುವ ಜನರಿಗೆ ಮಾರ್ಗದರ್ಶನದ ಕೊರತೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸಾಧ್ಯವಾಗುತ್ತಿಲ್ಲ. ಕಾಲೇಜು ಶಿಕ್ಷಣದಲ್ಲಿ ಮುಂದೆ ಇರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸುದಿಲ್ಲ. ಆದ್ದರಿಂದ ಅವರಿಗೆ ಯಶಸ್ಸಿನ ಮಾರ್ಗ ತೋರಿಸಲು ಯಾವ ರೀತಿ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂಬ ಚಿಂತನೆ ನಡೆಸಬೇಕಾಗಿದೆ. ಜೊತೆಗೆ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಲ್ಲಿ ಅವರಿಗೆ ಸೂಕ್ತ ತರಬೇತಿ ಕೊಡಿಸುವ ನಿಟ್ಟಿನಲ್ಲಿ ಪೋಷಕರು ಕ್ರಮ ಕೈಗೊಳ್ಳಬೇಕು ಎಂದರು.ಹಂಪಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೂ ಆದ ಸಾಹಿತಿ ಡಾ.ಹೆಬ್ಬಾಲೆ ಕೆ.ನಾಗೇಶ್ ಮಾತನಾಡಿ ಸಮುದಾಯಗಳ ಕುರಿತು ರಾಜಕೀಯ ಮಾಡಬೇಡಿ ಸಮುದಾಯಕೊಸ್ಕರ ರಾಜಕೀಯ ಮಾಡಿ ಆಗ ಮಾತ್ರ ನೀವು ಸಾಧನೆ ಮಾಡಲು ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಆದ್ದರಿಂದ ರಾಜಕಾರಣಿಗಳು ಸಮಾಜದ ಏಳಿಗೆಗಾಗಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.ದೇಶದಲ್ಲಿ ಹೆಣ್ಣು ಗಂಡುಗಳ ಲಿಂಗಬೇಧ ಇದೆ.ಮನಷ್ಯ ಮನಷ್ಯರ ನಡುವೆ ಜಾತಿ ವ್ಯವಸ್ಥೆ ಇದೆ.ಜಾತಿ ಜಾತಿಗಳ ನಡುವೆ ಇನ್ನು ಕೂಡ ಅತ್ಯಂತ ಕ್ರೋರವಾದ ಜಾತಿ ಸ್ಥಾಪಿಸಲು ಪಟ್ಟಿದೆ. ಹೆಣ್ಣು ಮಕ್ಕಳ ಶೋಷಣೆ, ಗುಲಾಮ ಪದ್ಧತಿಯಂತಹ ಅನೇಕ ವಿಚಾರಗಳನ್ನು ಭಾರತ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬಿಳಿಯರು ಮತ್ತು ಕರಿಯರು ಎಂಬ ಬೇಧವನ್ನು ಕಾಣುತ್ತೇವೆ. ಭಾರತ ದೇಶದಲ್ಲಿ ಅನೇಕ ಚಿಂತಕರು, ವಿದ್ವಾಂಸರು ಹುಟ್ಟಿ ಮಾರ್ಗದರ್ಶನ ತೋರಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಣ್ಣು ಮಕ್ಕಳು ಕೂಡ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಆಲಂಕರಿಸುವತ್ತಾಗಬೇಕು. ಪೋಷಕರು ಕೂಡ ಹೆಣ್ಣು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರದೆ ಅವರಿಗೆ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.ದಿವ್ಯ ಸನ್ನಿಧ್ಯವಹಿಸಿದ್ದ ಮೈಸೂರಿನ ಉರಿಲಿಂಗ ಪೆದ್ದಿ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು  ದೇಶದಲ್ಲಿನ ಆಥರ್ಿಕ ಬಡತನ ನಿರ್ಮೂಲನೆಗಾಗಿ ಮೀಸಲಾತಿಯನ್ನು ಜಾರಿಗೆ ತಂದಿದ್ದಾರೆ. ಈ ಮೀಸಲಾತಿ ಸೌಲಭ್ಯ ಪಡೆದು ಅನೇಕ ಹಿಂದುಳಿದ ಸಮುದಾಯಗಳು ಏಳಿಗೆ ಕಾಣುತ್ತಿವೆ. ಆದರೆ ಈ ಮೀಸಲಾತಿ ವಿರುದ್ಧ ಮಾತನಾಡುತ್ತಿದ್ದ ಸಮುದಾಯಗಳು ಈಗ ತಮ್ಮ ಜಾತಿಯ ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿ ಸೌಲಭ್ಯ ಕೋರಿ ಪಾದಯಾತ್ರೆ ನಡೆಸುತ್ತಿರುವುದು ದುರಂತ ಎಂದರು. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರವ ದಲಿತ ಸಮುದಾಯ ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶೈಕ್ಷಣಿಕವಾಗಿ ಅಭಿವೃದ್ಧೀ ಹೊಂದುವ ಮೂಲಕ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಬೇಕು. ದಲಿತ ಸಮುದಾಯದ ಅಧಿಕಾರಿಗಳು ಬದ್ಧತೆಯೊಂದಿಗೆ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸಿದ್ದಲ್ಲಿ ಸಮಾಜದ ಅಭಿವೃದ್ಧಿ ಸಾಧ್ಯವಿದೆ ಎಂದು ಹೇಳಿದರು. ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿದರ್ೇಶಕ ಎಚ್.ಡಿ.ಲಿಂಗರಾಜು ಅವರು ಐಎಎಸ್ ಅಧಿಕಾರಿ ನಾಗೇಂದ್ರ ಪ್ರಸಾದ್ ಅವರ ವ್ಯಕ್ತಿ ಪರಿಚಯ ಮಾಡುತ್ತ ಮಾತನಾಡಿ ಸಂವಿಧಾನ ಬದ್ಧವಾದ ರಕ್ಷಣೆ, ಶಾಸನ ಬದ್ಧವಾದ ಸವಲತ್ತುಗಳನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಕೊಟ್ಟಿದ್ದಾರೆ. ಜೊತೆಗೆ ಸ್ವಾಭಿಮಾನದ ಬದುಕನ್ನು ಕೊಟ್ಟಿದ್ದಾರೆ. ದಲಿತರಿಗೆ ದಲಿತರು ಎಂಬ ಅರಿವು ಮಾಡಿಕೊಟ್ಟಿದ್ದು, ಇದು ಬಹಳ ಮುಖ್ಯವಾಗಿದೆ ನಮ್ಮ ಕೀಳರಿಮೆಯನ್ನು ತೊಡೆದು ಹೊರ ಹೋಗಲು ಸ್ವಾಭಿಮಾನ ಹೆಮ್ಮೆಯಾಗಿದೆ ಎಂದರು. ಇಡೀ ಭಾರತವೇ ಬೌದ್ಧ ಭಾರತ ಆಗಬೇಕು ಎಂಬ ಕನಸ್ಸನ್ನು ಅಂಬೇಡ್ಕರ್ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ತಮಗೆ ಸಿಕ್ಕ ಅವಕಾಶದಲ್ಲಿ ಅವರು ಬೌದ್ಧ ಧರ್ಮದ ತತ್ವಗಳನ್ನು ಅನುಸರಿಸಿದ್ದಾರೆ.ನಾವು ಸಾಂಸ್ಕೃತಿಕವಾಗಿ ಬಿಡುಗಡೆ ಹೊಂದಲು ಬೌತಿಕ ಅಂಬೇಡ್ಕರ್ ಅವರನ್ನು ಬಿಟ್ಟು ಆಧ್ಯಾತ್ಮಿಕ ಅಂಬೇಡ್ಕರ್ ಅವರನ್ನು ಅನುಸರಿಸುತ್ತಿರುವ ಕ್ರಮ ಸರಿಯಲ್ಲ. ಆದ್ದರಿಂದ ಪ್ರತಿಯೊಬ್ಬರು ಅಂಬೇಡ್ಕರ್ ಅವರ ಮೌಲ್ಯ ಹಾಗೂ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಂಬೇಡ್ಕರ್ ವಾದಿಯಾಗಿ ಸಮಾಜದ ಏಳಿಗೆಗೆ ಶ್ರಮೀಸಬೇಕು ಎಂದು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲ ಎಚ್.ಕೆ.ಪುಟ್ಟರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜಯವರ್ಧನ್ , ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದಪ್ಪ, ಕಾರ್ಯಕ್ರಮ ಸಂಯೋಜಕ ಎಚ್.ಆರ್.ವಿಜಯ್, ಎಪಿಸಿಎಂಎಸ್ ನಿರ್ದೇಶಕ ಎಚ್.ಡಿ.ದೊಡ್ಡಯ್ಯ, ಗ್ರಾ.ಪಂ.ಮಾಜಿ ಅಧ್ಯಕ್ಷ ದೇವಯ್ಯ, ಅಬಕಾರಿ ಉಪ ನಿರೀಕ್ಷಕ ಎಚ್.ಆರ್.ನಾಗೇಶ್, ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಆರ್.ಮುರಳಿ , ವಕೀಲ ಎಚ್.ಎಂ.ರವೀಂದ್ರ, ಶಿಕ್ಷಕ ಎಚ್.ಕೆ.ಅಶೋಕ್ ಉಪಸ್ಥಿತರಿದ್ದರು. ಕೆ.ಆರ್.ನಗರ ಕಲಾತಂಡ ಸದಸ್ಯರು ಕ್ರಾಂತಿಗೀತೆ ಹಾಡಿ ಎಲ್ಲರ ಗಮನ ಸೆಳೆದರು.ಸನ್ಮಾನ : ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿ ಐಎಎಸ್ ಅಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರಿಗೆ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರು ಅಂಬೇಡ್ಕರ್ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಪರವಾಗಿ ಮೈಸೂರುಪೇಟ ತೊಡಿಸಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಜೊತೆಗೆ ಪ್ರಸಾದ್ ಅವರ ತಾಯಿ ನಿಂಗಜಮ್ಮ ಹಾಗೂ ಧರ್ಮಪತ್ನಿ ಅನುರಾಧ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  ಊರಿನ ಮುಖಂಡರು, ಅಭಿಮಾನಿಗಳು, ಬಂಧುಗಳು ಪ್ರಸಾದ್ ಪುಷ್ಪಹಾರ ಹಾಕಿ ಸನ್ಮಾನಿಸಿ ಗೌರವಿಸಿದರು. ನಂತರ ಸಮಿತಿ ವತಿಯಿಂದ ಜ್ಞಾನ ಪ್ರಕಾಶ್ ಸ್ವಾಮೀಜಿ, ಪ.ಪಂ.ಅಧ್ಯಕ್ಷ ಜಯವರ್ಧನ್, ಸಾಹಿತಿ ನಾಗೇಶ್, ನಿವೃತ್ತ ಅಧಿಕಾರಿ ಸಿದ್ದಪ್ಪ, ಎಚ್.ಡಿ.ಲಿಂಗರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

error: Content is protected !!