ಸ್ಪರ್ಧಾತ್ಮಕ ಪರೀಕ್ಷೆ : ಐಸಿಎಸ್‍ಟಿಎ ಯಿಂದ ತರಬೇತಿ

February 15, 2021

ಮಡಿಕೇರಿ ಫೆ.15 : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿಯನ್ನು ಒದಗಿಸುವ ನಿಟ್ಟಿನಲ್ಲಿ ಮೈಸೂರಿನ ಇಂಡಿಯನ್ ಸಿವಿಲ್ ಸರ್ವೀಸಸ್ ಟ್ರೈನಿಂಗ್ ಅಕಾಡೆಮಿ(ಐಸಿಎಸ್‍ಟಿಎ) ಕಾರ್ಯೋನ್ಮುಖವಾಗಿದ್ದು, ಇದೀಗ ಪೊಲೀಸ್ ಇಲಾಖೆಯ ಪಿಎಸ್‍ಐ ಹುದ್ದೆಗಳ ಭರ್ತಿ ಸಂಬಂಧ ತರಬೇತಿ ಕಾರ್ಯಕ್ರಮ ನೀಡಲು ಸಜ್ಜಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಸಿಎಸ್‍ಟಿಎ ಸಂಸ್ಥೆಯ ಸ್ಥಾಪಕಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪಟೇಲ್ ಎಸ್.ರಮೇಶ್ ಗೌಡ ಅವರು, ಪ್ರಸ್ತುತ 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಐಸಿಎಸ್‍ಟಿಎ ಸಂಸ್ಥೆ ಆಸಕ್ತ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದೆ. ಇದಕ್ಕಾಗಿ ಇದೇ ಫೆ.19 ಮತ್ತು 20 ರಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಛೇರಿ ಬಳಿಯ ಓವಲ್ ಮೈದಾನದಲ್ಲಿ ದೈಹಿಕ ಸಾಮಥ್ರ್ಯ ಪರೀಕ್ಷೆಯನ್ನು ಆಯೋಜಿಸಿದೆಯೆಂದು ಮಾಹಿತಿ ನೀಡಿದರು.
ಪ್ರಥಮ ಹಂತದ ಈ ಪರೀಕ್ಷೆಯಲ್ಲಿ 100 ಮಂದಿ ಅಭ್ಯರ್ಥಿಗಳನ್ನು ಸಂಸ್ಥೆ ಆಯ್ಕೆ ಮಾಡಿಕೊಂಡು, ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಅವಕಾಶ ಕಲ್ಪಿಸುತ್ತದೆ. ಇದರಲ್ಲಿ 30 ಮಂದಿಯನ್ನು ಅಂತಿಮವಾಗಿ ಆಯ್ಕೆ ಮಾಡಿ ಪಿಎಸ್‍ಐ ಹುದ್ದೆಗೆ ಪೂರಕವಾದ ತರಬೇತಿಯನ್ನು ನೀಡಲಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸೌಲಭ್ಯವನ್ನು ಸಂಸ್ಥೆ ಕಲ್ಪಿಸಲಿದೆ.ಪಿಎಸ್‍ಐ ಹುದ್ದೆಯ ತರಬೇತಿಗೆ ಆಸಕ್ತರಾದವರು ದೂ.0821-4191595, 9108982242, 9742632350 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ವಿವಿಧ ತರಬೇತಿ-2017 ರಲ್ಲಿ ಆರಂಭಗೊಂಡ ಐಸಿಎಸ್‍ಟಿಎ ಸಂಸ್ಥೆಯ ಮೂಲಕ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೊರತು ಪಡಿಸಿದಂತೆ, ರಾಜ್ಯ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಎಸ್‍ಎಸ್‍ಸಿ, ರೈಲ್ವೇಸ್ ಮತ್ತು ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೂ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲಾ ತರಬೇತಿಗಳಿಗೆ ಪೂರ್ವಭಾವಿಯಾಗಿ ಆಯಾ ಕ್ಷೇತ್ರಕ್ಕೆ ಅನುಗುಣವಾಗಿ ಅರ್ಹತಾ ಪರೀಕ್ಷೆ ಮೂಲಕವೇ ಅಭ್ಯರ್ಥಿಗಳಿಗೆ ಪ್ರವೇಶಾತಿಯನ್ನು ನೀಡಲಾಗುತ್ತದೆಂದು ವಿವರಿಸಿದರು.
ಐಸಿಎಸ್‍ಟಿಎ ಸಂಸ್ಥೆಯಲ್ಲಿ ತರಬೇತಿ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗದಿದ್ದಲ್ಲಿ ಅವರನ್ನು ಅದೇ ಕ್ಷೇತ್ರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ತರಬೇತಿಯೊಂದಿಗೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಹಕರಿಸಲಾಗುತ್ತದೆಂದು ಪಟೇಲ್ ಎಸ್. ರಮೇಶ್ ಗೌಡ ಸ್ಪಷ್ಟಪಡಿಸಿ, ಸಂಸ್ಥೆಯ ಆರಂಭಿಕ 2017 ರಲ್ಲಿ ಕೆಪಿಎಸ್‍ಸಿಗೆ ತರಬೇತಿ ಪಡೆದವರಲ್ಲಿ ಮೂವರು ರ್ಯಾಂಕ್ ಗಳಿಸಿದ್ದನ್ನು ಸ್ಮರಿಸಿಕೊಂಡು, ಇದೇ ರೀತಿಯ ಯಶಸ್ಸನ್ನು ಸಂಸ್ಥೆ ಪಡೆಯುತ್ತಾ ಬಂದಿದ್ದು, ಉತ್ತಮ ಫಲಿತಾಂಶ ಆಧಾರದಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.
ಐಎಇಎಸ್‍ಟಿಎ ಸಂಸ್ಥೆಯ ಮೂಲಕ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಹುದ್ದೆಗಳಿಗೆ 3 ತಿಂಗಳ ತರಬೇತಿ, ಕೆಪಿಎಸ್‍ಸಿಗೆ 6 ತಿಂಗಳ ತರಬೇತಿ ಸ್ಟಾಫ್ ಸೆಲೆಕ್ಷನ್ ಕಮಿಷನ್‍ಗೆ 3 ತಿಂಗಳ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಮೂಲ ತರಬೇತಿಯ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆಯೆಂದು ತಿಳಿಸಿದ ಅವರು, ತರಬೆÉೀತಿ ಪಡೆಯುವ ವಿದ್ಯಾರ್ಥಿಗಳಿಗೆ ಶೇ.25 ರಿಂದ ಶೇ.75 ರವರೆಗೆ ವಿದ್ಯಾರ್ಥಿ ವೇತನದ ಅವಕಾಶವನ್ನು ಕಲ್ಪಿಸಲಾಗಿದೆಯೆಂದು ವಿವರಗಳನ್ನಿತ್ತರು.
ಅರಿವು ಕಾರ್ಯಕ್ರಮ- ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳನ್ನು ಕೇಂದ್ರೀಕರಿಸಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದೀಗ ಸಂಸ್ಥೆ ಮೈಸೂರು ಮತ್ತು ಮಂಗಳೂರು ವಿವಿಗಳಿಗೆ ಒಳಪಟ್ಟ ಕಾಲೇಜುಗಳಲ್ಲಿ ಅಗತ್ಯ ಒಪ್ಪಿಗೆಯನ್ನು ಪಡೆದುಕೊಳ್ಳುವ ಮೂಲಕ, ಯಾವೆಲ್ಲ ವಿಷಯಗಳ ಅಧ್ಯಯನದಿಂದ ಯಾವೆಲ್ಲ ಉದ್ಯೋಗಾವಕಾಶಗಳು ಇವೆ ಎನ್ನುವ ಬಗ್ಗೆ ಅರಿವು ಮೂಡಿಸಲಾಗುತ್ತದೆಂದು ತಿಳಿಸಿ, ಜಿಲ್ಲೆಯ ಕೂರ್ಗ್ ಇನ್‍ಸ್ಟಿಟ್ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನೊಂದಿಗೆ ಇಂತÀಹ ಕಾರ್ಯ ನಡೆಸಲು ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದರು.

error: Content is protected !!