“ನಾಡಪೆದ ಆಶಾ” ಕೊಡವ ಸಿನಿಮಾ ಚಿತ್ರೀಕರಣ ಆರಂಭ

February 15, 2021

ಮಡಿಕೇರಿ ಫೆ.15 : ಯಶಸ್ವೀ 110 ದಿನಗಳ ಪ್ರದರ್ಶನ ಕಂಡ “ಕೊಡಗ್‍ರ ಸಿಪಾಯಿ” ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶಿಸುತ್ತಿರುವ
ಕಾದಂಬರಿ ಆಧಾರಿತ, ಮಹಿಳಾ ಪ್ರಧಾನ ಕಥಾ ವಸ್ತುವಿನ “ನಾಡಪೆದ ಆಶಾ” ಕೊಡವ ಚಲನಚಿತ್ರದ ಚಿತೀಕರಣಕ್ಕೆ ಚಾಲನೆ ನೀಡಲಾಗಿದೆ.
“ಗಿಏ3 PIಅಖಿUಖಇS” ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಉತ್ತಯ್ಯ ಹಾಗೂ ಈರಮಂಡ ಪೊನ್ನಮ್ಮ ಉತ್ತಯ್ಯ ಅವರು ನಿರ್ಮಿಸುತ್ತಿರುವ ಚಿತ್ರದ ಚಿತ್ರೀಕರಣವನ್ನು ಮೂರ್ನಾಡುವಿನ ಕೋಡಂಬೂರು ಗ್ರಾಮದ ಶ್ರೀಭದ್ರಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಯಿತು.
ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಕ್ಲಾಪ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆಗೆ ಕೊಡವ ಸಿನಿಮಾಗಳು ಕೂಡ ಸಹಕಾರಿಯಾಗಿದೆ ಎಂದರು.
ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ ಕೋಡಂಬೂರು ಶ್ರೀಭದ್ರಕಾಳಿ ದೇವಾಲಯದ ಅಧ್ಯಕ್ಷ ಹಾಗೂ ಗ್ರಾ.ಪಂ ಸದಸ್ಯ ಮೂಡೇರ ಅಶೋಕ್ ಅಯ್ಯಪ್ಪ ಅವರು ಕೊಡವ ಭಾಷೆಯ ಚಲನಚಿತ್ರಗಳಿಗೆ ಎಲ್ಲರ ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಮಾತನಾಡಿ ವರ್ಷಕ್ಕೊಂದು ಕೊಡವ ಸಿನಿಮಾವನ್ನು ನಿರ್ದೇಶಿಸುವುದಾಗಿ ತಿಳಿಸಿದರು. ಹೆಣ್ಣೊಬ್ಬಳ ಸಾಮಾಜಿಕ ಕಳಕಳಿಯ ಬದುಕಿನ ಮೇಲೆ “ನಾಡಪೆದ ಆಶಾ” ಕಾದಂಬರಿ ಬೆಳಕು ಚೆಲ್ಲಿದೆ. ಕೊಡಗಿನ ವಿವಿಧೆಡೆ 12 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದರು.
ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಚಿತ್ರ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
“ನಾಡಪೆದ ಆಶಾ” ಕಾದಂಬರಿ ರಚನೆಕಾರ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯೊಬ್ಬಳ ಬದುಕಿನ ಮಹಿಳಾ ಪ್ರಧಾನ ಕಥಾ ವಸ್ತುವಿನ ಬಗ್ಗೆ ವಿವರಿಸಿದರು.
ನಿರ್ಮಾಪಕರಾದ ಈರಮಂಡ ಹರಿಣಿ ವಿಜಯ್ ಉತ್ತಯ್ಯ, ಈರಮಂಡ ಪೊನ್ನಮ್ಮ ಉತ್ತಯ್ಯ, ಕಾರ್ಯಕಾರಿ ನಿರ್ಮಾಪಕ ಹಾಗೂ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ, ಚಿತ್ರದ ಪ್ರಧಾನ ಪಾತ್ರಧಾರಿ, ನಾಯಕಿ, ರಂಗ ಕಲಾವಿದೆ ಅಡ್ಡಂಡ ಅನಿತಾ ಕಾರ್ಯಪ್ಪ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ನಟ ವಾಂಚಿರ ವಿಠಲ್ ನಾಣಯ್ಯ, ತಾತಂಡ ಪ್ರಭಾ ನಾಣಯ್ಯ, ಚೆರುವಲಂಡ ಸುಜುಲ ನಾಣಯ್ಯ, ನೆಲ್ಲಚಂಡ ರಿಷಿ ಪೂವಮ್ಮ, ಅಜ್ಜಿಕುಟ್ಟಿರ ಸುಬ್ಬಯ್ಯ, ತೇಲಪಂಡ ಪವನ್ ತಮ್ಮಯ್ಯ, ಕೊಟ್ಟುಕತ್ತಿರ ಆರ್ಯ ದೇವಯ್ಯ, ಬೊಳ್ಳಜಿರ ಯಮುನಾ ಅಯ್ಯಪ್ಪ, ಈರಮಂಡ ಕೇಸರಿ ಬೋಜಮ್ಮ, ವಿಜಯ್, ಹರಿಣಿ, ಕುಶಿ ಕಾವೇರಮ್ಮ ಮತ್ತಿತರರು ಹಾಜರಿದ್ದರು.
ಚಿತ್ರಕಥೆ ಮತ್ತು ಸಂಭಾಷಣೆ, ನಿರ್ದೇಶನ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಸಂಗೀತ ವಿಠಲ್ ರಂಗಧೋಳ್, ಛಾಯಗ್ರಾಹಕರಾಗಿ ಪ್ರದೀಪ್ ಆರ್ಯನ್, ಸಾಹಿತ್ಯ ಆಪಾಡಂಡ ಜಗ್ಗ ಮೊಣ್ಣಪ್ಪ, ಕಾರ್ಯಕಾರಿ ನಿರ್ಮಾಪಕರಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಸಹ ನಿರ್ದೇಶಕರಾಗಿ ನಾಗರಾಜು ನೀಲ್ ಹಾಗೂ ಇತಿಹಾಸ್ ಶಂಕರ್, ಸಂಕಲನ ಆನಂದ್ ಅನಿ, ವರ್ಣಸಂಸ್ಕರಣರಾಗಿ ನಿಖಿಲ್ ಕಾರ್ಯಪ್ಪ, vಜಿx ಸುಶ್ರುøತ್ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮಾರು 50 ಕ್ಕೂ ಹೆಚ್ಚು ನಟರು “ನಾಡಪೆದ ಆಶಾ” ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಕೊಡಗಿನ ಬೇತ್ರಿ, ಬಿ.ಶೆಟ್ಟಿಗೇರಿ, ಹೊದ್ದೂರು, ಮೂರ್ನಾಡು, ಸೂರ್ಲಬಿ, ಮುಕ್ಕೋಡ್ಲು, ಮಡಿಕೇರಿ ಮತ್ತಿತರೆಡೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ.

error: Content is protected !!