ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಯ್ಯಮುಡಿ ಆದರ್ಶ್, ನವನೀತ

February 15, 2021

ಮಡಿಕೇರಿ ಫೆ.15 : ರಾಜ್ಯವನ್ನು ಪ್ರತಿನಿಧಿಸಿದ್ದ ವಾಲಿಬಾಲ್ ಕ್ರೀಡಾಪಟು, ಭಾರತೀಯ ಭೂ ಸೇನೆಯ ಬೆಂಗಳೂರು ವಿಭಾಗದ ಅಧಿಕಾರಿ ಕೆ.ಎಂ.ಆದರ್ಶ್ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸಿದ್ದ ಬಾಸ್ಕೆಟ್ ಬಾಲ್ ಪಟು ರೈಲ್ವೆ ಇಲಾಖೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನವನೀತ ವಿವಾಹ ಸಮಾರಂಭ ಕುಶಾಲನಗರದಲ್ಲಿ ನಡೆಯಿತು.
ನವನೀತಾ ಸುಂಟಿಕೊಪ್ಪ ಗದ್ದೆಹಳ್ಳದ ಕೃಷಿಕ ಪಟ್ಟೆಮನೆ ಉದಯಕುಮಾರ್ ಹಾಗೂ ಗಿರಿಜಾ ದಂಪತಿಗಳ ದ್ವಿತೀಯ ಪುತ್ರಿಯಾಗಿದ್ದಾರೆ. ಆದರ್ಶ್ ಭಾಗಮಂಡಲದ ನಿವಾಸಿ ನಿವೃತ್ತ ಯೋಧ ಕುಯ್ಯಮುಡಿ ಟಿ.ಮುದ್ದಯ್ಯ ಹಾಗೂ ಲಲಿತಾ ದಂಪತಿಗಳ ಪುತ್ರರಾಗಿದ್ದಾರೆ.
ರೈತ ಭವನದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಬಂಧು, ಬಳಗ ಹಾಗೂ ಕ್ರೀಡಾ ಕ್ಷೇತ್ರದ ಪ್ರಮುಖರು ಸಾಕ್ಷಿಯಾದರು.

error: Content is protected !!