ಮಡಿಕೇರಿ : ಗೋಹತ್ಯೆ ನಿಷೇಧ ಕಾಯ್ದೆ : ಮಾಜಿ ಸಿಎಂ ಸಿದ್ದರಾಮಯ್ಯ ಜನರ ಹಾದಿ ತಪ್ಪಿಸುತ್ತಿದ್ದಾರೆ : ಸಚಿವ ಪ್ರಭು ಚೌಹಾಣ್ ಟೀಕೆ

February 16, 2021

ಮಡಿಕೇರಿ ಫೆ.16 : ಗೋಹತ್ಯೆ ನಿಷೇಧ ಕಾಯ್ದೆ ಜಾರಿಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಸಚಿವ ಪ್ರಭು ಚೌಹಾಣ್ ಆರೋಪಿಸಿದ್ದಾರೆ. ಗೋಮಾಂಸ ತಿನ್ತೀವಿ ತಿನ್ತೀವಿ ಅನ್ನೋದಲ್ಲ, ನಮ್ಮ ಮುಂದೆ ತಿನ್ನಿ ನೋಡೋಣ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಅವರ ಮನೆಯಲ್ಲಿ ಕೂಡಾ ಗೋವುಗಳಿವೆ. ವಿರೋಧ ಮಾಡೋದು ವಿರೋಧ ಪಕ್ಷದ ಕೆಲಸ. ನಾವು ಗೋ ರಕ್ಷಣೆ ಮಾಡುತ್ತೇವೆ ಎಂದು ಸಂಕಲ್ಪ ತೊಟ್ಟಿದ್ದು, ಅದನ್ನು ಮಾಡಿಯೇ ಸಿದ್ದ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲಾರು ದೀಪಾವಳಿ, ಯುಗಾದಿ, ಸಂಕ್ರಾಂತಿಗೆ ಗೋಪೂಜೆ ಮಾಡುತ್ತಾರೆ. ಕೇವಲ ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಭು ಚೌಹಾಣ್ ಹೇಳಿದರು.
ಪಶುಪಾಲನಾ ಇಲಾಖೆಯಲ್ಲಿ ಶೇ.52ರಷ್ಟು ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಹಲವು ವರ್ಷಗಳಿಂದಲೇ ಈ ಹುದ್ದೆಗಳು ಭರ್ತಿಯಾಗಿಲ್ಲ. ಇದೀಗ ವರ್ಷಕ್ಕೆ ಕನಿಷ್ಟ 100 ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಆ ದಿಸೆಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಭು ಚೌಹಾಣ್ ಹೇಳಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹುದ್ದೆಗಳು ಭರ್ತಿಯಾಗಲಿದೆ ಎಂದು ಸಚಿವರು ಭರವಸೆ ನೀಡಿದರು.

error: Content is protected !!