ಹೊದ್ದೂರು ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಜೀವಕಲಶ ಪೂಜೆ

February 17, 2021

ಮಡಿಕೇರಿ ಫೆ.17 : ಹೊದ್ದೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಪವಾಡ ಶಕ್ತಿಯೆಂದೇ ಪ್ರಸಿದ್ಧಿಯನ್ನು ಪಡೆದಿರುವ ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸದ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು.
ಮುಂಜಾನೆಯಿಂದಲೇ ಗಣಪತಿ ಹೋಮ, ಧಾನ್ಯ ಪೂಜೆ, ಸಂಹಾರ ತತ್ವ ಕಲಶ ಪೂಜೆ, ಸಂಹಾತ ತತ್ವ ಹೋಮ, ಪ್ರತಿಷ್ಠಾ ಕಲಶ ಪೂಜೆ, ಶಯ್ಯ ಪೂಜೆ, ಚೈತನ್ಯ ವೃದ್ಧಿ ಹೋಮ, ಪ್ರತಿಷ್ಠಾ ಹೋಮ, ಸಂಹಾರ ತತ್ವ ಕಲಶಾಭಿಷೇಕ ಪೂಜೆ, ಧಾನ್ಯ ಸಂಕೋಚ ಪೂಜೆ, ಜೀವಕಲಶ ಪೂಜೆ ನಡೆಯಿತು.
ಮಧ್ಯಾಹ್ನ ಬಿಂಬೋದ್ಧಾರ ಕ್ರೀಯಾದ ನಂತರ ಸಂಜೆ ದೇವಸ್ಥಾನ ಶುದ್ಧೀಕರಣ, ಧ್ಯಾನಾಧಿವಾಸ ಪೂಜೆ ಹಾಗೂ ಮಹಾಪೂಜೆ ಜರುಗಿತು.
ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಿದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

error: Content is protected !!