ಪೊನ್ನಂಪೇಟೆ ಸಿಐಟಿ ಕಾಲೇಜಿನ ಹೆಲ್ತ್‌ಕ್ಲಬ್ ಉದ್ಘಾಟನೆ

February 17, 2021

ಪೊನ್ನಂಪೇಟೆ, ಫೆ. 17 : ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದು ಜನರ ಆರೋಗ್ಯದ ದೃಷ್ಠಿಯಿಂದ ಬಹಳ ಮಹತ್ವದ್ದಾಗಿದ್ದು, ಅದೊಂದು ಸುಯೋಗವೆಂದೇ ತಿಳಿಯಬೇಕು ಎಂದು ಡಾ. ಕಾವೇರಿ ನಂಬಿಸನ್ ಹೇಳಿದರು.
ಪೊನ್ನಂಪೇಟೆಯ ಹಳ್ಳಿಗಟ್ಟುವಿನಲ್ಲಿರುವ ಕೊಡವ ಎಜುಕೇಷನ್ ಸೊಸೈಟಿಯ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ (CIT) ಕಾಲೇಜಿನ ಹೆಲ್ತ್‍ಕ್ಲಬ್‍ಅನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಸಮುದಾಯದ ಜನರು ಒಬ್ಬರಿಗೊಬ್ಬರು ಹತ್ತಿರದ ಸಂಪರ್ಕ ಹೊಂದಿದ್ದಾರೆ. ಅವರುಗಳಿಗೆ ವೈದ್ಯಕೀಯ ಸೇವೆ ದೊರಕಿಸಿಕೊಡುವುದು ಆದ್ಯ ಕರ್ತವ್ಯ. ಹಾಗೆಯೇ ಗ್ರಾಮೀಣ ಹಿನ್ನೆಲೆಯಲ್ಲಿ ವಿದ್ಯಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ (CIT) ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸಮುದಾಯದ ಆರೋಗ್ಯವನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ಡಾ. ಕಾವೇರಿ ನಂಬಿಸನ್ ಹೇಳಿದರು.
ಈ ಸರಳ ಸಮಾರಂಭದಲ್ಲಿ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಚೆಪ್ಪುಡಿರ ಪಿ. ಬೆಳ್ಳಿಯಪ್ಪ, ಉಪಾಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ, ಗೌರವ ಕಾರ್ಯದರ್ಶಿ ಚಿರಿಯಪಂಡ ಪಿ. ರಾಕೇಶ್ ಪೂವಯ್ಯ, ಖಜಾಂಚಿ ಕಟ್ಟೆರ ಎನ್. ಉತ್ತಪ್ಪ, ಜಂಟಿ ಕಾರ್ಯದರ್ಶಿ ಚಿರಿಯಪಂಡ ಎಂ. ರಾಜ ನಂಜಪ್ಪ, ನಿರ್ದೇಶಕರುಗಳು, ಪ್ರಾಂಶುಪಾಲರಾದ ಡಾ. ಎಂ. ಬಸವರಾಜ್, ಆರೋಗ್ಯ ಸಮಿತಿ ಸಂಚಾಲಕ ಆಲೆಮಾಡ ಜಿ. ತಿಮ್ಮಯ್ಯ ಹಾಜರಿದ್ದರು.

error: Content is protected !!