ಕೋವಿಡ್ ವ್ಯಾಕ್ಸಿನ್ ನೀಡುವಲ್ಲಿ ಕರ್ನಾಟಕ ಪ್ರಥಮ : ಪ್ರತಾಪ್ ಸಿಂಹ ಮೆಚ್ಚುಗೆ

February 17, 2021

ಮಡಿಕೇರಿ ಫೆ.17 : ಆರೋಗ್ಯ ಇಲಾಖೆ ಕಾರ್ಯಕರ್ತೆಯರಿಗೆ ಕೋವಿಡ್ ವ್ಯಾಕ್ಸಿನ್ ನೀಡುವಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ರಾಜ್ಯದ ಏರ್ ಪೋರ್ಟ್‍ಗಳಲ್ಲಿಯೂ ಲಿಬರಲ್ ಆಗಿ ಸೇವೆ ನೀಡಲಾಗುತ್ತಿದೆ.
ಎಲ್ಲಿಯೂ ಸಮಸ್ಯೆಯಾಗಿಲ್ಲ, ತಾಯಿ ಚಾಮುಂಡೇಶ್ವರಿ ಮತ್ತು ಕಾವೇರಿ ಮಾತೆಯ ಆಶೀರ್ವಾದಿಂದ ರಾಜ್ಯ ಮತ್ತು ಕೊಡಗಿನಲ್ಲಿ ಎಲ್ಲವೂ ಸುಭಿಕ್ಷೆಯಲ್ಲಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾ ಬಿಜೆಪಿ ಮುಖಂಡರಾದ ಮನು ಮುತ್ತಪ್ಪ, ಮಹಿಳಾ ಮೋರ್ಛಾದ ಯಮುನಾ ಚಂಗಪ್ಪ ಉಪಸ್ಥಿತರಿದ್ದರು.

error: Content is protected !!