ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

February 17, 2021

ಮಡಿಕೇರಿ. ಫೆ.17 : ಪ್ರಸಕ್ತ(2020-21) ಸಾಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಇಲಾಖಾ ವೆಬ್‍ಸೈಟ್ www.ssp.karnataka.gov.in ಅಥವಾ ಶಾಲೆಯ ಸ್ಯಾಟ್ಸ್ ವೆಬ್‍ಸೈಟ್ https :sts.karnataka.gov.in ನಲ್ಲಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ (ssp.postmatric.karnataka.gov.in) ನಲ್ಲಿ ಅರ್ಜಿ ಸಲ್ಲಿಸಲು ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗಗಳ ವಿದ್ಯಾಥಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (ಆದಾಯ ಮಿತಿ ಮೆಟ್ರಿಕ್ ನಂತರದ 2.50 ಲಕ್ಷ ಮತ್ತು ಮೆಟ್ರಿಕ್ ಪೂರ್ವ ಆದಾಯ ಮಿತಿ 1 ರಿಂದ 8ನೇ ತರಗತಿಗೆ 2.50 ಲಕ್ಷ ಮತ್ತು 9 ರಿಂದ 10ನೇ ತರಗತಿಗೆ 6 ಲಕ್ಷ), ವಿದ್ಯಾರ್ಥಿ ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ (ಕಡ್ಡಾಯವಾಗಿ ಆಧಾರ್ ಸೀಡಿಂಗ್ ಮತ್ತು ಎನ್‍ಪಿಸಿಐ ಮ್ಯಾಪಿಂಗ್ ಮಾಡಿರಬೇಕು), ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಕಡ್ಡಾಯ), ಹಿಂದಿನ ವರ್ಷದ ಮಾರ್ಕ್ ಕಾರ್ಡ್ ಪ್ರತಿ,
ಇತ್ತೀಚಿನ ಭಾವಾಚಿತ್ರ, ಅಧ್ಯಯನ/ ಬೋನಾ ಪೈಡ್ ಪ್ರಮಾಣ ಪತ್ರ, ಶುಲ್ಕ ರಶೀಧಿ, ತಂದೆ/ತಾಯಿ/ ಪೋಷಕರ ಆಧಾರ್ ಕಾರ್ಡ್ ದಾಖಲಾತಿ, ಆದಾಯ ಮಿತಿ 2.50 ಲಕ್ಷಕ್ಕಿಂತ ಹೆಚ್ಚು 10 ಲಕ್ಷ ರೂ. ಒಳಗಿರುವ ಸಿ.ಇ.ಟಿ. ಮೂಲಕ ಎಂ.ಬಿ.ಎಸ್, ಬಿ.ಡಿ.ಎಸ್. ಬಿ.ಇ. ಬಿ.ಟೆಕ್, ಬಿ.ಆರ್ಕ್ ಕೋರ್ಸ್‍ಗಳಿಗೆ ಆಯ್ಕೆಯಾದ ಮಾತ್ರ ಸರ್ಕಾರಿ/ ಅನುದಾನಿತ/ ಅನುದಾನರಹಿತ/ ಖಾಸಗಿ ಮತ್ತು ಡಿಮ್ಸ್ ವಿಶ್ವ ವಿದ್ಯಾನಿಲಯದ ಕಾಲೇಜು/ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದರೆ ಅಂತಹ ವಿದ್ಯಾರ್ಥಿಗಳು ಶೇ100 ರಷ್ಟು ಆಯಾ ಸಂಸ್ಥೆಗಳಿಗೆ ನಿಗಧಿಪಡಿಸಿದ ಶುಲ್ಕ ಪಡೆಯಲು ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸಲು ಮಾರ್ಚ್ 15 ಕಡೆ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಮಡಿಕೇತಿ. ದೂರವಾಣಿ ಸಂಖ್ಯೆ 9480843155, 08272-223552 ನ್ನು ಮತ್ತು ಸಹಾಯ ವಾಣಿ ಸಂಖ್ಯೆ 08044554455 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!