ಬಲ್ಯಮಂಡೂರು ಗ್ರಾಮದಲ್ಲಿ ಮತ್ತೆ ಹುಲಿ ದಾಳಿ : ಕೊಟ್ಟಿಗೆಯಲ್ಲಿದ್ದ ಕರು ಬಲಿ

February 17, 2021

ಮಡಿಕೇರಿ ಫೆ.17 : ದಕ್ಷಿಣ ಕೊಡಗಿನ ಬಲ್ಯಮಂಡೂರು ಗ್ರಾಮದಲ್ಲಿ ಮತ್ತೆ ಹುಲಿ ದಾಳಿಯಾಗಿದೆ. ಸ್ಥಳೀಯ ನಿವಾಸಿ ಕೊಟ್ಟಂಗಡ ವಿಶು ಬೋಪಣ್ಣ ಎಂಬುವವರ ಕೊಟ್ಟಿಗೆಯಿಂದ 7 ತಿಂಗಳ ಕರುವನ್ನು ಎಳೆದೊಯ್ದು ತಿಂದು ಹಾಕಿರುವ ಹುಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮೂರನೇ ಬಾರಿಗೆ ಹುಲಿ ಗ್ರಾಮಕ್ಕೆ ಲಗ್ಗೆ ಇಟ್ಟು ಜಾನುವಾರನ್ನು ಕೊಂದು ಹಾಕಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತೋಟದ ಸುತ್ತಮುತ್ತ ವನ್ಯಜೀವಿ ಸಂಚರಿಸುತ್ತಿರುವುದರಿಂದ ತೋಟಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲವೆಂದು ಬೆಳೆಗಾರರು ಹಾಗೂ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ.

error: Content is protected !!