ನಟ ಯಶ್, ಸಿದ್ದರಾಮಯ್ಯರನ್ನು ಅಂತ್ಯಕ್ರಿಯೆಗೆ ಆಹ್ವಾನಿಸಿ ಪ್ರಾಣಬಿಟ್ಟ ಯುವಕ

February 18, 2021

ಮಂಡ್ಯ: ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಟ ಯಶ್‌ ಆಗಮಿಸಬೇಕು ಎಂದು ಡೆತ್ ‌ನೋಟ್‌ ಬರೆದಿಟ್ಟು ಕಾಂಗ್ರೆಸ್‌ ಕಾರ್ಯಕರ್ತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಂಡ್ಯ ತಾಲೂಕ ಕೆರೆಗೋಡು ಹೋಬಳಿ ಕೊಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಆತ್ಮಹತ್ಯೆ ಮಾಡಿಕೊಂಡಾತ. ಅಂತ್ಯಕ್ರಿಯೆ ವೇಳೆ ತನ್ನ ಮೊಬೈಲ್‌ನ್ನು ಚಿತೆಗೆ ಹಾಕುವಂತೆ ಡೆತ್‌ನೋಟ್‌ನಲ್ಲಿ ಯುವಕ ಮನವಿ ಮಾಡಿದ್ದಾನೆ.

ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಡಿದೊಡ್ಡಿ ಗ್ರಾಮಕ್ಕೆ ಗುರುವಾರ ಆಗಮಿಸುತ್ತಿದ್ದಾರೆ. ಡೆತ್‌ನೋಟ್‌ನಲ್ಲಿ ತನ್ನ ಕೊನೆ ಎರಡು ಆಸೆಗಳನ್ನು ಈಡೇರಿಸಿ ಎಂದು ಯುವಕ ಬರೆದಿದ್ದು, ರಾಕಿಂಗ್‌ ಸ್ಟಾರ್‌ ನಟ ಯಶ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದ.

error: Content is protected !!