ಫೆ.21 ರಂದು ಸಿಎನ್ ಸಿ ಯಿಂದ ಮಡಿಕೇರಿಯಲ್ಲಿ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ

February 18, 2021

ಮಡಿಕೇರಿ ಫೆ.18 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಫೆ.21 ರಂದು ಮಡಿಕೇರಿಯ ಜೂನಿಯರ್ ಕಾಲೇಜ್ ಸಮೀಪದ ಕೊಡವ ಕೋಲ್ ಮಂದ್ ನಲ್ಲಿ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ನಡೆಯಲಿದೆ ಎಂದು ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿವರ್ಷ ಸಂಘಟನೆ ವತಿಯಿಂದ ಮಾತೃಭಾಷಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ವಿಶಿಷ್ಟವಾದ ಕೊಡವ ಭಾಷೆಯನ್ನು 8 ನೇ ಶೆಡ್ಯೂಲ್ ಗೆ ಸೇರಿಸಬೇಕೆಂದು ಒತ್ತಾಯಿಸಲಾಗುತ್ತಿದೆ ಎಂದರು. ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಬೇಕು, ರಾಜ್ಯಾಂಗ ಖಾತ್ರಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ನಾಚಪ್ಪ ಹೇಳಿದ್ದಾರೆ.

error: Content is protected !!