‘ಡಿ’ ಗ್ರೂಪ್ ದರ್ಜೆಯ ಹುದ್ದೆಗೆ ಅರ್ಹ ಬಿಡ್‍ದಾರರಿಂದ ಅರ್ಜಿ ಆಹ್ವಾನ

February 18, 2021

ಮಡಿಕೇರಿ ಫೆ.18 : ಸಹಾಯಕ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ, ಕೊಡಗು ಜಿಲ್ಲೆ, ಮಡಿಕೇರಿ ಈ ಕಚೇರಿಯಲಿ ಮೂರು ವರ್ಷದ ಅವಧಿಗೆ ಒಂದು ‘ಡಿ’ ಗ್ರೂಪ್ ದರ್ಜೆಯ ದಲಾಯತ ಹುದ್ದೆಗೆ ಇ-ಟೆಂಡರ್ ಆಹ್ವಾನಿಸಿದ್ದು, ಆಸಕ್ತ ಬಿಡ್‍ದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಇ-ಪ್ರೋಕ್ಯುರ್‍ಮೆಂಟ್ ಮೂಲಕ ಪಾಲ್ಗೊಳ್ಳಬಹುದು. ಭಾಗವಹಿಸಲು ಮಾರ್ಚ್, 04 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.08272-228678, ಮೊ.ಸಂ.9164864298 ನ್ನು ಅಥವಾ https://eproc.karnataka.gov.in ವೆಬ್‍ಸೈಟ್‍ನಲ್ಲಿ ಲಭ್ಯವಿರುವ (ADIR/DPSSM/KODAGU(1)06/2020-21 ಸಂಖ್ಯೆಯ ಟೆಂಡರ್ ಡಾಕ್ಯುಮೆಂಟ್‍ನ್ನು ಪಡೆಯಬಹುದು ಎಂದು ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

error: Content is protected !!