ಫೆ.24 ರಂದು ವಿರಾಜಪೇಟೆಯಲ್ಲಿ ಬೃಹತ್ ರಕ್ತದಾನ ಶಿಬಿರ

February 18, 2021

ಮಡಿಕೇರಿ ಫೆ.18 : ಹ್ಯುಮಾನಿಟಿ ಟ್ರಸ್ಟ್ ವತಿಯಿಂದ ವಿರಾಜಪೇಟೆಯಲ್ಲಿ ಫೆ.24 ರಂದು ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಟ್ರಸ್ಟ್‍ನ ಸದಸ್ಯ ಎಫ್.ಮೊಹ್ಸಿನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಫೆ.24 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 3 ಗಂಟೆವರೆಗೆ ವಿರಾಜಪೇಟೆಯ ದೊಡ್ಡಟ್ಟಿ ಚೌಕಿ, ಶ್ರೀಕೃಷ್ಣ ಕಂಫರ್ಟ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸತತ ಎರಡು ವರ್ಷಗಳಿಂದ ಹ್ಯುಮಾನಿಟಿ ಬ್ಲಡ್ ಡೋನರ್ಸ್ ವಾಟ್ಸ್ ಆಪ್ ಗ್ರೂಪ್‍ನ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ವರ್ಷದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಹಿಳಾ ರಕ್ತದಾನಿಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಟ್ರಸ್ಟ್‍ನ ಉಪಾಧ್ಯಕ್ಷ ಎಂ.ಎ.ಮಹಮ್ಮದ್ ಆಸೀಂ ಮಾತನಾಡಿ, ಸಮಾಜಸೇವೆಯ ದೃಷ್ಟಿಯಿಂದ ಹ್ಯುಮಾನಿಟಿ ಬ್ಲಡ್ ಡೋನರ್ಸ್ ವಾಟ್ಸ್‍ಆಪ್ ಗ್ರೂಪನ್ನು ಪ್ರಾರಂಭಿಸಲಾಗಿದ್ದು, ಟ್ರಸ್ಟ್ ನ್ನು ನೋಂದಣಿ ಮಾಡಲಾಗಿದೆ. ರಕ್ತದಾನ ಶಿಬಿರದಂದು ಟ್ರಸ್ಟ್‍ನ ಉದ್ಘಾಟನೆಯೂ ನಡೆಯಲಿದೆ ಎಂದರು.
ರಕ್ತದಾನ ಮಾಡುವವರು ಹೆಚ್ಚಿನ ಮಾಹಿತಿಗಾಗಿ 9449174029, 9611071437, 9964555564, 9591252618, 7676984533 ನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಅಧ್ಯಕ್ಷ ಎಸ್.ಎ.ಸಫೀಕ್ ಅಹಮ್ಮದ್, ಕಾರ್ಯದರ್ಶಿ ಹೆಚ್.ಫೈಝಲ್ ಹಾಗೂ ಖಜಾಂಚಿ ಹಬಿಬುಲ್ಲ ಉಪಸ್ಥಿತರಿದ್ದರು.

error: Content is protected !!