ಫೆ.19 ರಂದು ಮಡಿಕೇರಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

February 18, 2021

ಮಡಿಕೇರಿ ಫೆ.18 : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2020-21ನೇ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಫೆ.19 ರಂದು ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷÀ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಲಿದ್ದಾರೆ.
ಕಾಲೇಜ್‍ನ ಪ್ರಾಂಶುಪಾಲರಾದ ಪ್ರೋ.ಚಿತ್ರಾ ವೈ. ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶನಿವಾರಸಂತೆಯ ಶ್ರೀವಿಘ್ನೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಪಿ.ಜಯಕುಮಾರ್ ಪಾಲ್ಗೊಳ್ಳಲಿದ್ದಾರೆ.
::: ವಿದ್ಯಾರ್ಥಿ ವೇದಿಕೆಯ ಪದಾಧಿಕಾರಿಗಳು :::
ಉಪಾಧ್ಯಕ್ಷರಾಗಿ ಹೆಚ್.ಎ.ದೀಕ್ಷಿತ್‍ಗೌಡ (ಅಂತಿಮ ಬಿ.ಎ.), ಕಾರ್ಯದರ್ಶಿ ಎ.ಮೋಳಿ (ಅಂತಿಮ ಬಿ.ಎ), ಜಂಟಿ ಕಾರ್ಯದರ್ಶಿ ಸಿ.ಯು.ಪೂಜಾ (ಅಂತಿಮ ಬಿ.ಬಿ.ಎ), ಯುವಕರ ವಿಭಾಗದ ಸಾಂಸ್ಕøತಿಕ ಕಾರ್ಯದರ್ಶಿ ಹೆಚ್.ಸಿ. ದೀಕ್ಷಿತ್ (ಅಂತಿಮ ಬಿ.ಎ), ಯುವತಿಯರ ವಿಭಾಗದ ಕಾರ್ಯದರ್ಶಿಯಾಗಿ ಹೆಚ್.ಆರ್. ಕಾವ್ಯ ( ಅಂತಿಮ ಬಿ.ಎ), ಯುವಕರ ವಿಭಾಗದ ಕ್ರೀಡಾ ಕಾರ್ಯದರ್ಶಿ ಎಂ. ಶಫೀಖ್(ದ್ವಿತೀಯ ಬಿಬಿಎ), ಯುವತಿಯರ ವಿಭಾಗದ ಕಾರ್ಯದರ್ಶಿಯಾಗಿ ಟಿ.ಆರ್. ಅನಿತ (ಅಂತಿಮ ಬಿ.ಎ) ಆಯ್ಕೆಯಾಗಿದ್ದಾರೆ.

error: Content is protected !!