ಗರಗಂದೂರಿನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನದ 14ನೇ ವಾರ್ಷಿಕ ಮಹೋತ್ಸವ

February 18, 2021

ಸುಂಟಿಕೊಪ್ಪ,ಫೆ.18: ಗರಗಂದೂರಿನ ಶ್ರೀ ಕುರುಂಭ ಭಗವತಿ ಭದ್ರಕಾಳಿ ದೇವಸ್ಥಾನದ 14ನೇ ವರ್ಷದ ವಾರ್ಷಿಕ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ 3 ದಿನಗಳ ಕಾಲ ವಿಶೇಷ ಪೂಜೆ, ದೈವಕೋಲಗಳೊಂದಿಗೆ ವಾರ್ಷಿಕೋತ್ಸವಕ್ಕೆ ತೆರೆಯೆಳೆಲಾಯಿತು.
ಗರಗಂದೂರಿನ ಶ್ರೀ ಕುರುಂಭ ಭಗವತೀ ಭದ್ರಕಾಳಿ ದೇವಸ್ಥಾನದ 14ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪ, ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕಾರಿಸಲಾಗಿತ್ತು. ತಾ 16 ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ ಹಾಗೂ ದುರ್ಗಾಪೂಜೆಯನ್ನು ನೇರವೇರಿಸಲಾಯಿತು. ತಾ.17 ರಂದು ಸಂಜೆ 5 .ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು,ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ, ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಣೆ ನಡೆಸಲಾಯಿತು 9.30 ಗಂಟೆಗೆ ಶ್ರೀ ವಸೂರಿ ದೇವಿಯ ವೆಳ್ಳಾಟಂ ನಡೆಯಿತು.
ತಾ.18 ರಂದು ಬೆಳಿಗ್ಗೆ 9. ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ಶ್ರೀದೇವಿಯ ವಸೂರಿಮಲೆಯ ತೆಯ್ಯಂ,ಮತ್ತು 12.30ರಿಂದ ಶ್ರೀ ಕುರುಂಭ ಭಗವತಿ ವೆಳಚ್ಚಪಾಡ್ ಕೋಮರಂ ತುಳ್ಳಲ್ ದೈವಕೋಲ ನೇರವೇರಿಸುವುದರೊಂದಿಗೆ ವಾರ್ಷಿಕ ಮಹಾಪೂಜೆ ಸಮಪ್ತಿಗೊಂಡಿತು.
ಗರಗಂದೂರು ಸೇರಿದಂತೆ ಸುತ್ತ ಮುತ್ತಲ್ಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ನೇರೆದಿದ್ದು ವಿಶೇಷಪೂಜೆ, ದೇವರ ಪ್ರಸಾದ ಹಾಗೂ ಮದ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.

error: Content is protected !!