ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜ್ ನಲ್ಲಿ ಕ್ರೀಡಾಕೂಟ

February 18, 2021

ಮಡಿಕೇರಿ ಫೆ.18 : ವಿರಾಜಪೇಟೆ ಪಟ್ಟಣದ ಸೆಂಟ್ ಅನ್ಸ್ ಪದವಿ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಫುಟ್ಬಾಲ್ ಮತ್ತು ವಿದ್ಯಾರ್ಥಿನಿಯರಿಗೆ ಥ್ರೋ ಬಾಲ್ ಪಂದ್ಯಾಟ ನಡೆಯಿತು.
ಕಾಲೇಜ್ ನ ಅಂತಿಮ ಬಿ.ಬಿ.ಎ ವಿದ್ಯಾರ್ಥಿಗಳು ಆಯೋಜಿಸಿದ್ದ ಕ್ರೀಡಾಕೂಟವನ್ನು ಪದವಿ ಕಾಲೇಜ್ ನ ಪ್ರಾಂಶುಪಾಲರಾದ ರೆ.ಫಾ.ರೋನಿ ರವಿಕುಮಾರ್ ಉದ್ಘಾಟಿಸಿದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು ವಿಜೇತರಿಗೆ ಬಹುಮಾನ ವಿತರಿಸಿದರು.
ಫುಟ್ಬಾಲ್ ಪಂದ್ಯಾಟದಲ್ಲಿ ಅಂತಿಮ ಬಿ.ಬಿ.ಎ ವಿದ್ಯಾರ್ಥಿಗಳು ವಿನ್ನರ್ ಹಾಗೂ ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿಗಳು ರನ್ನರ್ ಟ್ರೋಪಿಯನ್ನು ಪಡೆದರು.
ವೈಯಕ್ತಿಕ ವಿಭಾಗದಲ್ಲಿ ಉತ್ತಮ ಗೋಲ್ ಕೀಪರ್ ಹಂಸೀರ್, ಉತ್ತಮ ತಂಡ ರಕ್ಷಣೆ ಪ್ರಜ್ವಲ್, ಉತ್ತಮ ಸ್ಕೋರ್ ಕೌಶಿಕ್ ಹಾಗೂ ಉತ್ತಮ ಆಟಗಾರ ದ್ವಿತೀಯ ಬಿ.ಬಿ.ಎ.ಯ ಮೊಹಮ್ಮದ್ ಸಾಯಿದ್, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಂಶದಲಿ ಹಾಗೂ ಉತ್ತಮ ತಂಡ ಪ್ರಶಸ್ತಿಯನ್ನು ದ್ವಿತೀಯ ಬಿ.ಕಾಂ. ಬಿ ತಂಡವು ತನ್ನದಾಗಿಸಿಕೊಂಡಿತು.
ವಿದ್ಯಾರ್ಥಿನಿಯರ ಥ್ರೋ ಬಾಲ್ ಪಂದ್ಯದಲ್ಲಿ ದ್ವಿತೀಯ ಬಿ.ಕಾಂ. ಎ ತಂಡ ವಿನ್ನರ್ಸ್ ಪ್ರಶಸ್ತಿಯನ್ನು ಪಡೆದರೆ, ಅಂತಿಮ ಬಿ.ಸಿ.ಎ ತಂಡ ರನ್ನರ್ ಟ್ರೋಪಿಯನ್ನು ಗೆದ್ದುಕೊಂಡಿತು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!