ಬಾಳುಗೋಡಿನಲ್ಲಿ ವಸತಿ ಕಾಲೇಜು ನಿರ್ಮಾಣಕ್ಕೆ ಚಾಲನೆ : ಉನ್ನತ ವ್ಯಾಸಂಗಕ್ಕೆ ಆದ್ಯತೆ ನೀಡಿ : ಗಿರಿಜನ ವಿದ್ಯಾರ್ಥಿಗಳಿಗೆ ಶಾಸಕ ಕೆ.ಜಿ.ಬಿ ಸಲಹೆ

February 18, 2021

ಮಡಿಕೇರಿ ಫೆ.18 : ಗಿರಿಜನ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸುವ ಮೂಲಕ ಉನ್ನತ ವ್ಯಾಸಂಗಕ್ಕೆ ಗಿರಿಜನ ವಿದ್ಯಾರ್ಥಿಗಳು ಆದ್ಯತೆ ನೀಡಬೇಕೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ.
ರಾಜ್ಯ ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ವಿರಾಜಪೇಟೆ ಬಾಳೂಗೋಡು ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ 4.23 ಕೋಟಿ ರೂ. ವೆಚ್ಚದ ವಸತಿ ಕಾಲೇಜು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಯಾವುದೇ ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯ ಮತ್ತು ಶಿಕ್ಷಣದಿಂದ ವಂಚಿತರಾಗಬಾರದು, ಗಿರಿಜನ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶಿಕ್ಷಣದ ಅರಿವು ಮೂಡಿಸಬೇಕಿದೆ ಎಂದರು.
ಜಿ.ಪಂ ಸದಸ್ಯರುಗಳಾದ ಶಶಿಸುಬ್ರಮಣಿ, ಅಪ್ಪಡೆರೆಂಡ ಭವ್ಯ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಿಟ್ಟಂಗಾಲ ಗ್ರಾ.ಪಂ ಅಧ್ಯಕ್ಷೆ ರಮ್ಯ ಅವರು ಮಾತನಾಡಿದರು.

ತಾ.ಪಂ ಸದಸ್ಯರುಗಳಾದ ಬಿ.ಎಂ.ಗಣೇಶ್, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ಪಟ್ರಪಂಡ ರಘುಸೋಮಯ್ಯ, ಆರ್ಜಿ ಗ್ರಾ.ಪಂ ಉಪಧ್ಯಾಕ್ಷ ಕೆ.ಎನ್.ಉಪೇಂದ್ರ, ಸಮಗ್ರ ಗಿರಿಜನ ಸಮನ್ವಯ ಇಲಾಖೆಯ ಅಧಿಕಾರಿ ಶಶಿಕುಮಾರ್, ಗ್ರಾ.ಪಂ ಸದÀಸ್ಯರಾದ ರಾಜು ಸೋಮಯ್ಯ, ಮಾಚಮ್ಮ, ಏಕಲವ್ಯ ವಸತಿ ಶಾಲೆಯ ಉಪನ್ಯಾಸಕರು, ಭೋದಕೇತರ ವೃಂದದವರು, ವಿಧ್ಯಾರ್ಥಿಗಳು, ಗ್ರಾಮಸ್ಥರು, ನೂತನ ಕಟ್ಟಡ ಕಾಮಗಾರಿಯ ಗುತ್ತಿಗೆದಾರರು ಮತ್ತಿತರರು ಹಾಜರಿದ್ದರು.

error: Content is protected !!